ಪ್ರಮುಖ ಸುದ್ದಿಮನರಂಜನೆಮೈಸೂರು

ಜ್ವಾಲಾಮುಖಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘ ಹೊರತಂದ ದಿನದರ್ಶಿಕೆ ಬಿಡುಗಡೆಗೊಳಿಸಿದ ಪುನೀತ್ ರಾಜ್ ಕುಮಾರ್

ಮೈಸೂರು,ಡಿ.18:- ಡಾ. ರಾಜ್ ಕುಮಾರ್ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ , ಅವರ ನಟನೆ, ಅವರ ವ್ಯಕ್ತಿತ್ವ, ಅವರಲ್ಲಿದ್ದ ದೈವೀಯ ಗುಣ, ಅಭಿಮಾನಿಗಳನ್ನೇ ದೇವರೆಂದು ಅಭಿಮಾನಗಳನ್ನು ಆರಾಧಿಸುತ್ತಿದ್ದ ದೇವತಾ ಮನುಷ್ಯ , ಅಣ್ಣಾವ್ರು. ಅವರ ಅಭಿಮಾನಕ್ಕೆ ಎಲ್ಲೆಯೇ ಇಲ್ಲ, ಅವರ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿ ಕರುನಾಡಿನಾದ್ಯಂತ ಹಲವಾರು ಅಭಿಮಾನಗಳ ಸಂಘ ಬೇರೂರಿವೆ. ಅವರ ಪ್ರತಿಮೆಗಳಿಂದ ಹಿಡಿದು ಕೆಲವು ಕಡೆ ಅವರ ಹೆಸರಿನಲ್ಲಿ ಡಾ. ರಾಜ್ ಕುಮಾರ್ ರಸ್ತೆ, ಡಾ. ರಾಜ್ ಕುಮಾರ್ ಸರ್ಕಲ್ ಎಂದು ಕೂಡ ನಿರ್ಮಾಣವಾಗಿವೆ.
ಈ ನಮ್ಮ ಗಂಧದ ಗುಡಿಯಲ್ಲಿ ಉಸಿರು ನಿಂತರೂ ಹೆಸರು ನಿಂತಿರದ ಆಕಾಶದ ಕಾಮನಬಿಲ್ಲು, ಜೀವನ ಚೈತ್ರದಿ ನಗುವ ಬಂಗಾರದ ಮನುಷ್ಯ, ಕನ್ನಡಿಗರ ಕಣ್ಮಣಿ, ಭುವನೇಶ್ವರಿಯ ಕಲಾಪುತ್ರ ಅಭಿಮಾನಿಗಳ ಪಾಲಿನ ರವಿಚಂದ್ರ ಡಾ. ರಾಜ್ ಕುಮಾರ್. ಇವರ ಮೇಲಿನ ಪ್ರೀತಿಗೆ ಅದೆಷ್ಟೋ ಅಭಿಮಾನಿಗಳು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇದರ ಜೊತೆಗೆ ಸಮಾಜಮುಖಿ ಕೆಲಸಗಳು ಸಹ ನಡೆಯುತ್ತಿವೆ.
ಇದೀಗ ಮೈಸೂರು ಇಟ್ಟಿಗೆಗೂಡಿನ ಜ್ವಾಲಾಮುಖಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದವರು ಹೊಸ ವರ್ಷ ಆಗಮಿಸುತ್ತಿದ್ದಂತೆ 2021 ನೇ ಸಾಲಿನ ಡಾ. ರಾಜ್ ಕ್ಯಾಲೆಂಡರ್ ಹೊರ ತಂದಿದ್ದಾರೆ. ಈ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿಸಲು ಜ್ವಾಲಾಮುಖಿ ಡಾ. ರಾಜ್ ಅಭಿಮಾನಿಗಳ ಸಂಘದವರು ಬೆಂಗಳೂರಿಗೆ ತೆರಳಿ ಡಾ.ರಾಜ್ ಕಿರಿಯ ಪುತ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಂದ ದಿನದರ್ಶಿಕೆ ಬಿಡುಗಡೆ ಗೊಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: