ಮೈಸೂರು

ವಿಚಿತ್ರ ಕಾಯಿಲೆ : ಕೊಳೆಯುತ್ತಿರುವ ಕಾಲ್ಬೆರಳು ; ಸೂಕ್ತ ಚಿಕಿತ್ಸೆಗಾಗಿ ಮನವಿ

ಮೈಸೂರು,ಡಿ.18:- ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆಯ ಜಿ.ಎಂ ಹಳ್ಳಿ ಹಾಡಿ ಯಲ್ಲಿ ಬಸವರಾಜು ಎಂಬ 37 ವರ್ಷದ ವ್ಯಕ್ತಿಗೆ ಎರಡು ಕಾಲುಗಳ ಪಾದಗಳಲ್ಲಿ ಒಂದೊಂದು ಬೆರಳುಗಳು ಕೊಳೆತು ತುಂಡಾಗಿವೆ. ಉಳಿದ ಬೆರಳುಗಳು ವಿಚಿತ್ರ ರೀತಿಯಲ್ಲಿ ಗಾಯಗಳಾಗಿ ಕೊಳೆಯುತ್ತಿವೆ. ಇದರಿಂದಾಗಿ ತುಂಬಾ ನೋವಿನಿಂದ ಭಾದೆ ಅನುಭವಿಸುತ್ತಿದ್ದು ಸಂಬಂಧಪಟ್ಟವರು ಸೂಕ್ತ ನೀಡಲು ಮುಂದಾಗಬೇಕೆಂದು ಮಾನ ಹಕ್ಕುಗಳ ಹೋರಾಟಗಾರ ಪ್ರಸನ್ನ ತಿಳಿಸಿದರು.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿದ್ದು, ನಾನು ತಾಲೂಕಿನ ಮುಖ್ಯ ವೈದ್ಯರಾದ ರವಿ ಕುಮಾರ್ ಅವರ ಗಮನಕ್ಕೂ ತಂದಿದ್ದೇನೆ. ಅವರು ಸಂಚಾರಿ ವೈದ್ಯಕೀಯ ಚಿಕಿತ್ಸೆ ನೀಡಲು ವೈದ್ಯರನ್ನು ಹಾಡಿಗೆ ಕಳುಹಿಸುವದಾಗಿ ತಿಳಿಸಿದರು. ಮಾನವೀಯ ಮೌಲ್ಯಗಳನ್ನು ಉಳಿಸುವ ಸಲುವಾಗಿ ಜಿಲ್ಲಾ ಆಡಳಿತಕ್ಕೆ ಸಂಬಂಧಿಸಿದ ಇಲಾಖೆಗಳಾದ ಎಸ್ ಪಿ ಡಿಸಿಆರ್ ಇ ಪರಿಶಿಷ್ಟ ಪಂಗಡಕ್ಕೆ ಸೇರಿದ Tribal department, ಸಮಾಜ ಕಲ್ಯಾಣ ಇಲಾಖೆ, ಅರೋಗ್ಯ ಇಲಾಖೆ ಇದನ್ನು ಗಮನಿಸಿ ಜಿಲ್ಲಾ ಕೇಂದ್ರದಿಂದ ಬದುಕನ್ನು ಉಳಿಸುವಂತೆ ವಿನಂತಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: