ಮೈಸೂರು

ಸಾರ್ವಜನಿಕರು ಪಂಚಗವಿ ಮಠದ ಆಸ್ತಿಯನ್ನು ದುರುಪಯೋಗ ಮಾಡುವಂತಿಲ್ಲ

ಮೈಸೂರು. ಡಿ.18:- ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಅರಮನೆ ಪಂಚಗವಿ ಮಠದ ಆಸ್ತಿಯನ್ನು ದುರುಪಯೋಗ ಮಾಡುತ್ತಿರುವುದಾಗಿ ಸರ್ಕಾರದ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಮಠಕ್ಕೆ ಸೇರಿದ ಕೃಷಿ ಜಮೀನು ಹಾಗೂ ಇತರೆ ಆಸ್ತಿಗಳನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಸರ್ಕಾರದ ಆದೇಶದ ಮೇರೆಗೆ ಮೈಸೂರು ಉಪವಿಭಾಗಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಸಾರ್ವಜನಿಕರು ಇನ್ನು ಮುಂದೆ ಅರಮನೆ ಪಂಚಗವಿ ಮಠಕ್ಕೆ ಸಂಬಂಧಿಸಿದಂತೆ ಎಲ್ಲಾ ವ್ಯವಹಾರಗಳನ್ನು ಮೈಸೂರು ಉಪವಿಭಾಗದ ಉಪವಿಭಾಗಾಧಿಕಾರಿಗಳ ಮುಖಾಂತರ ನಿರ್ವಹಿಸಬೇಕೆಂದು ಅರಮನೆ ಪಂಚಗವಿ ಮಠದ ಮೈಸೂರು ವಿಭಾಗದ ಉಪವಿಭಾಗಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: