ಮೈಸೂರು

ಅನಕ್ಷರತೆ ಮುಕ್ತ ವಿಶ್ವ ನಿರ್ಮಾಣ ರೋಟರಿಯ ಮುಂದಿನ ಗುರಿ

ಬೈಲಕುಪ್ಪೆ: ಪೋಲಿಯೋ ಮುಕ್ತ ವಿಶ್ವ ನಿರ್ಮಾಣದಲ್ಲಿ ರೋಟರಿ ಸಂಸ್ಥೆ ಯಶಸ್ವಿಯಾಗಿದ್ದು ಮುಂದೆ ಅನಕ್ಷರತೆ ಮುಕ್ತ ವಿಶ್ವದ ನಿರ್ಮಾಣಕ್ಕೆ ಕೈ ಹಾಕಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಡಾ.ಆರ್‍.ಎಸ್. ನಾಗಾರ್ಜುನ ಹೇಳಿದ್ದಾರೆ.

ಬೈಲಕುಪ್ಪೆ ಲಾಸಾ ರೋಟರಿಗೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಟಿಬೇಟಿಯನ್ ನಿರಾಶ್ರಿತರ ಸಕಲ ಮಂದಿರದ ಹಾಲ್‍ನಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳನ್ನೊಳಗೊಂಡು ರೋಟರಿ ಜಿಲ್ಲೆ 3181 ಅಸ್ತಿತ್ವಕ್ಕೆ ಬಂದಿದ್ದು, ಜಗತ್ತಿನಲ್ಲಿ 25 ಪೋಲಿಯೋ ಪ್ರಕರಣಗಳು ಪತ್ತೆಯಾಗಿದ್ದು, 2017ರ ವೇಳೆಗೆ ಪೋಲಿಯೋ ಮುಕ್ತ ಜಗತ್ತು ಆಗಲಿದೆ. ಅನಕ್ಷರತೆ ಮುಕ್ತ ಜಗತ್ತು ನಿರ್ಮಾಣಕ್ಕೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಬೈಲಕುಪ್ಪೆ ರೋಟರಿ ಅಧ್ಯಕ್ಷ ಲಕ್ಪಾ ಸಿರಿಂಗ್ ಮಾತನಾಡಿ, ರೋಟರಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಆರೋಗ್ಯ ಶಿಬಿರಗಳು, ರೋಟರಿಯ ನೂತನ ಸದಸ್ಯರಿಗೆ ಅರಿವು ಕಾರ್ಯಕ್ರಮ, ಸಹಾಯಧನ, ಶೈಕ್ಷಣಿಕ ಪ್ರೋತ್ಸಾಹ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ ಎಂದು ಹೇಳಿದರು.
ಅಸಿಸ್ಟೆಂಟ್ ಗವರ್ನರ್ ಪ್ರಶಾಂತ್, ಬೈಲಕುಪ್ಪೆಯ ಲಾಸಾ ರೋಟರಿಯ ಅಧ್ಯಕ್ಷ ಲಕ್ಪಾ ಸಿರಿಂಗ್, ಕಾರ್ಯದರ್ಶಿ ತೆಂಜಿನ್ ಯಾಂಗ್ ಚೇನ್, ಸದಸ್ಯರಾದ ತೆಂಜಿನ್ ಸೋನಾಮ್, ನಿಮಾ ಸಿರಿಂಗ್, ಪರಿಯಾಪಟ್ಟಣದ ರೋಟರಿ ಸದಸ್ಯರಾದ ಸಿ.ಎನ್. ವಿಜಯ್, ಡಾ. ಚಂದ್ರಶೇಖರ್, ಕುಶಾಲನಗರದ ರೋಟರಿ ಅಧ್ಯಕ್ಷ ಎ.ಎ. ಚಂಗಪ್ಪ ಮಹೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: