ಮೈಸೂರು

ಹೆಚ್.ವಿ.ರಾಜೀವ್ ಸ್ನೇಹಬಳಗದಿಂದ ಅಂಬೇಡ್ಕರ್ ಜನ್ಮದಿನಾಚರಣೆ : ಸ್ವಚ್ಛತಾ ಅಭಿಯಾನ

ಭಾರತ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ 126ನೇ ಜಯಂತಿ ಪ್ರಯುಕ್ತ ಹೆಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಮೈಸೂರಿನ ಅಶೋಕಪುರಂ ಬಡಾವಣೆಯಲ್ಲಿ  ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಅಶೋಕಪುರಂ ಉದ್ಯಾನದ ಬಳಿ ಇರುವ  ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರನ್ನು ಸ್ಮರಿಸಲಾಯಿತು. ಈ ಸಂದರ್ಭ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್, ಉಪಮೇಯರ್ ರತ್ನ ಲಕ್ಷ್ಮಣ್, ಕಸಾಪ  ಮಾಜಿ ಅಧ್ಯಕ್ಷ ಚಂದ್ರು, ಸ್ನೇಹ ಬಳಗ್ ರಾಜೀವ್ ಉಪಸ್ಥಿತರಿದ್ದರು.  ಜನ್ಮ ದಿನಾಚರಣೆಯ ಬಳಿಕ 150ನೇ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಹೆಚ್.ವಿ.ರಾಜೀವ್ ಮೈಸೂರು ಸ್ವಚ್ಛ ನಗರಿ ಎಂದು ಗುರುತಿಸಿಕೊಂಡಿದೆ. ಅದು ಸದಾ ಹಾಗೆಯೇ ಮುಂದುವರಿಯಬೇಕು ಎನ್ನುವ ಸದುದ್ದೇಶದಿಂದ ಪ್ರತಿವಾರದ ಭಾನುವಾರ ನಗರದ ಒಂದೊಂದು ಕಡೆ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದ್ದೇನೆ. ಇದು ನಾವು ನಡೆಸುತ್ತಿರುವ 150ನೇ ಅಬಿಯಾನ ಎಂದರು. ಅಶೋಕಪುರಂ ಬಡಾವಣೆಗಳಲ್ಲಿ ಸ್ವಯಂ ಕಾರ್ಯಕರ್ತರು ಸ್ವಚ್ಛತೆ ನಡೆಸಿ ಜನಜಾಗೃತಿ ಮೂಡಿಸಿದರು.   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ  ಸದಸ್ಯರು ಹಾಗೂ ಶ್ರೀ ಕಲ್ಕಿ  ಭಗವಾನ್ ಮಾನವ ಸೇವಾಲಯ ಸದಸ್ಯರು, ಶ್ರೀ ಗುರು ರಾಘವೇಂದ್ರ ಸ್ನೇಹ ಬಳಗದ ಸದಸ್ಯರು, ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮತಿ ಸದಸ್ಯರು,ನವೋದಯ ಫೌಂಡೇಷನ್ ಸದಸ್ಯರು,  ಸ್ಪಂದನ ಟ್ರಸ್ಟ್ ಸದಸ್ಯರು, ನಮ್ಮ ಖುಷಿ ಟ್ರಸ್ಟ್ ಸದಸ್ಯರು , ಸಮರ್ಪಣ ತಂಡದ ಸದಸ್ಯರು, ಲಯನ್ ನಿಸರ್ಗ ಅಸೋಸಿಯೇಷನ್ ಸದಸ್ಯರು,  ಎಸ್ ಬಿಎಂ ಕಾಲೋನಿಯ ನಿವಾಸಿಗಳು,  ಎಲ್ಲಾ  ಪೌರ ಕಾಮಿ೯ಕ  ಮುಖ೦ಡರು ಮತ್ತು ಸಾರ್ವಜನಿಕರು, ಹಲವು ಸ೦ಘ ಸ೦ಸ್ಥೆಗಳು ಪಾಲ್ಗೊಂಡಿದ್ದವು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: