ಮೈಸೂರು

ಪರವಾನಿಗೆ ಇಲ್ಲದೆ ಅಕ್ರಮವಾಗಿ 23.220 ಲೀಟರ್ ಮದ್ಯ ಸಾಗಾಟ : ಮೊಕದ್ದಮೆ ದಾಖಲು

ಮೈಸೂರು,ಡಿ,19:- ಪರವಾನಿಗೆ ಇಲ್ಲದೆ ಅಕ್ರಮವಾಗಿ 23.220 ಲೀಟರ್ ಮದ್ಯ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮೊಕದ್ದಮೆ ದಾಖಲಿಸಲಾಗಿದೆ.

ಅಬಕಾರಿ ಇಲಾಖೆ ಮೈಸೂರು ವಲಯ 3ರ ಸಿಬ್ಬಂದಿಗಳು ಗ್ರಾಮಪಂಚಾಯಿತಿ ಚುನಾವಣೆ-2020ರ ಹಿನ್ನೆಲೆಯಲ್ಲಿ ಸರಸ್ವತಿಪುರಂ ನಿಂದ ಕಲಾಮಂದಿರಕ್ಕೆ ಹೋಗುವ ರಸ್ತೆ ಬಳಿ ರಸ್ತೆ ಗಸ್ತು ನಡೆಸುತ್ತಿದ್ದಾಗ KA.02.D 8548 ಬಿಳಿ ಬಣ್ಣದ ಮಾರುತಿ ವ್ಯಾನ್ ನಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ 23.220 ಲೀಟರ್ ಮದ್ಯವನ್ನು ಹೊಂದಿ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಮೊಕದ್ದಮೆಯನ್ನು ದಾಖಲಿಸಲಾಗಿದೆ.

ಆರೋಪಿ ಪರಾರಿಯಾಗಿದ್ದು, ಸ್ಥಳದಲ್ಲಿ ದೊರೆತ ಮದ್ಯ ಹಾಗೂ ಮಾರುತಿ ವ್ಯಾನ್ ಅನ್ನು ಇಲಾಖಾ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಲಾಗಿದೆ. ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಪಿ.ಪ್ರೇಮ, ಅಬಕಾರಿ ಉಪನಿರೀಕ್ಷಕ ವಿ.ಲೋಕೇಶ್, ಸಿಬ್ಬಂದಿಗಳಾದ ಜೆ.ಶಿವಕುಮಾರ್, ಎಚ್.ಜೆ.ಮೋಹನ್ ಕುಮಾರ್, ಪಿ.ರಾಘವೇಂದ್ರ, ಗುರುಮಲ್ಲು, ಮದನ್ ಕುಮಾರ್, ನಿಂಗರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: