ದೇಶಪ್ರಮುಖ ಸುದ್ದಿಮನರಂಜನೆ

ಕೆಜಿಎಫ್ ಚಾಪ್ಟರ್ 2 ಕ್ಲೈಮಾಕ್ಸ್ ಚಿತ್ರೀಕರಣ ಪೂರ್ಣ

ದೇಶ(ಮಂಬೈ)ಡಿ.21:- ತಮ್ಮ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ ಕೆಜಿಎಫ್ ಚಾಪ್ಟರ್ 2 ಕ್ಲೈಮಾಕ್ಸ್ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಚಲನಚಿತ್ರ ನಿರ್ಮಾಪಕ ಪ್ರಶಾಂತ್ ನೀಲ್ ಭಾನುವಾರ ಹೇಳಿದ್ದಾರೆ.
ಈ ಚಿತ್ರ ಚಂದನವನದ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ 2018 ರ ಚಿತ್ರ ಕೆಜಿಎಫ್ ಚಿತ್ರದ ಮುಂದುವರಿದ ಭಾಗವಾಗಿದೆ. ನಟ ಸಂಜಯ್ ದತ್ ‘ಕೆಜಿಎಫ್: ಚಾಪ್ಟರ್ 2’ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಚಿತ್ರೀಕರಣ ಮುಗಿದ ನಂತರ ಚಿತ್ರದ ಪಾತ್ರವರ್ಗ ಮತ್ತು ಚಿತ್ರ ನಿರ್ಮಾಣ ತಂಡದ ಸದಸ್ಯರ ಚಿತ್ರವನ್ನು ನೀಲ್ ಟ್ವೀಟ್ ಮಾಡಿದ್ದಾರೆ. ದಣಿಸಿದ ಚಿತ್ರೀಕರಣ ಮುಗಿದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ತಂಡವು ಅತ್ಯುತ್ತಮವಾಗಿ ತಮ್ಮ ಕೆಲಸವನ್ನು ಮುಗಿಸಿದೆ ಎಂದು ಹೇಳಿದ್ದಾರೆ. ಸಂಜಯ್ ದತ್ ನಿಜ ಜೀವನದಲ್ಲಿ ನಿಜವಾದ ಯೋಧ ಎಂದು ಹೇಳಿದ್ದಾರೆ.
ಆಗಸ್ಟ್ ನಲ್ಲಿ 61ರ ಹರೆಯದ ನಟ ಸಂಜಯ್ ದತ್ ಅವರು ಕ್ಯಾನ್ಸರ್ ವಿರುದ್ಧದ ಹೋರಾಟದತ್ತ ಗಮನಹರಿಸಲು ತಮ್ಮ ವೃತ್ತಿಪರ ಬದ್ಧತೆಗಳಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ನಟ ಚಿತ್ರದ ಚಿತ್ರೀಕರಣವನ್ನು ನವೆಂಬರ್‌ನಲ್ಲಿ ಪುನರಾರಂಭಿಸಿದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: