ಕರ್ನಾಟಕಪ್ರಮುಖ ಸುದ್ದಿಮೈಸೂರು

ಆರ್‍ಟಿಐ ಶಾಲಾ ಪ್ರವೇಶಕ್ಕೆ ದುಪ್ಪಟ್ಟು ಶುಲ್ಕ ವಸೂಲಿ: ಸರ್ವ ಜನಾಂಗ ಹಿತರಕ್ಷಣಾ ವೇದಿಕೆಯಿಂದ ಆಗಸ್ಟ್ 30ರಂದು ಪ್ರತಿಭಟನೆ

ಆರ್.ಟಿ.ಐ ಕಾಯ್ದೆಯಡಿ ಶಾಲಾ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಂಪೂರ್ಣ  ಉಚಿತವಾಗಿ ಶಿಕ್ಷಣ ನೀಡಬೇಕೆಂದು ಸರ್ಕಾರದ ಆದೇಶವಿದ್ದರು ಖಾಸಗಿ ಶಿಕ್ಷಣ ಸಂಸ್ಥೆಗಳು ನಿಯಮಬಾಹಿರವಾಗಿ ಶುಲ್ಕ ವಸೂಲಾತಿಗಿಳಿದಿದ್ದು ಇದನ್ನು ಖಂಡಿಸಿ ಸರ್ವಜನಾಂಗ ಹಿತರಕ್ಷಣಾ ವೇದಿಕೆಯು  ಆಗಸ್ಟ್ 30ರ ಮಂಗಳವಾರದಂದು  ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.

ವೇದಿಕೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್ ಪ್ರತಿಭಟನೆಯ ನೇತೃತ್ವ ವಹಿಸಲಿದ್ದು ಬೆಳಿಗ್ಗೆ 11 ಗಂಟೆಗೆ ಗಾಂಧಿ ವೃತ್ತದ ಗಾಂಧಿ ಪ್ರತಿಮೆಯ ಬಳಿ ಹಮ್ಮಿಕೊಳ್ಳಲಾಗಿದೆ.  ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಪ.ಜಾತಿ ಮತ್ತು ಪ.ಪಂಗಡಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎನ್ನುವ ಸರ್ಕಾರದ  ಆದೇಶವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು  ಗಾಳಿಗೆ ತೂರಿ ಶುಲ್ಕ ವಸೂತಿ ನಡೆಸಿವೆ,  ಕಿರಿಯ-ಹಿರಿಯ ಪ್ರಾಥಮಿಕ, ಪ್ರೌಡಶಾಲೆಗಳಲ್ಲಿ ಯಾವುದೇ ರೀತಿಯ ಶುಲ್ಕವನ್ನು ತೆಗೆದುಕೊಳ್ಳುವಂತಿಲ್ಲ ಎನ್ನುವ  ಸರ್ಕಾರದ ಆದೇಶವನ್ನು ಲೆಕ್ಕಿಸದ ಖಾಸಗಿ  ಶಿಕ್ಷಣ ಸಂಸ್ಥೆಗಳು ಕ್ಯಾಪಿಟೇಷನ್ ಶುಲ್ಕದ ರೂಪದಲ್ಲಿ ದುಪ್ಪಟು ಹಣ ವಸೂಲಿ ಮಾಡುತ್ತಿದ್ದು ಇದನ್ನು ವಿರೋಧಿಸಿ ವೇದಿಕೆಯು ಪ್ರತಿಭಟನೆ ನಡೆಸಲಿದೆ.

Leave a Reply

comments

Related Articles

error: