ಮೈಸೂರು

ನಗದು ರಹಿತ ವ್ಯವಹಾರ ದೇಶದ ಅಭಿವೃದ್ಧಿಗೆ ಪೂರಕ : ಡಿ.ರಂದೀಪ್

ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ವೈಪಿಂಗ್ ಯಂತ್ರಗಳನ್ನು ವಿತರಿಸಲಾಯಿತು.

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್  ವಿವಿಧ ಬ್ಯಾಂಕ್ ಗಳ ಮೂಲಕ ನೀಡಲಾಗುವ ಸ್ವೈಪಿಂಗ್ ಮಶಿನ್ ಗಳನ್ನು  ಅರ್ಹ ಫಲಾನುಭವಿಗಳಿಗೆ  ವಿತರಿಸಿದರು. ಈ ಸಂದರ್ಭ ಮಾತನಾಡಿದ ಅವರು ನಗದು ರಹಿತ ವ್ಯವಹಾರಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ವ್ಯಾಪಾರ್ಸ್ಥರಿಗೆ ಹೋಟೆಲ್ ಉದ್ಯಮದವರಿಗೆ ಈ ನಗದು ರಹಿತ ವ್ಯವಹಾರ ಅನುಕೂಲವಾಗಲಿದೆ ಎಂದರು.

ನಗದು ರಹಿತ ವ್ಯವಹಾರವು ದೇಶದ ಅಭಿವೃದ್ಧಿಗೆ ಪೂರಕವಾಗಲಿದ್ದು, ಖೋಟಾ ನೋಟು ಚಲಾವಣೆಯನ್ನು ತಪ್ಪಿಸಬಹುದಾಗಿದೆ. ಪ್ರಸ್ತುತ ದಿನದಲ್ಲಿ ನಗದು ರಹಿತವ್ಯವಹಾರವೇ ಹೆಚ್ಚು ಅನುಕೂಲವಾಗಲಿದ್ದು, ವ್ಯಾವಹಾರಿಕವಾಗಿ ಬಳಸಿಕೊಂಡಾಗ ಹೆಚ್ಚು ಅನುಕೂಲವಾಗಲಿದೆ. ಈ ಕುರಿತು ಎಲ್ಲರಲ್ಲಿಯೂ ಸಂಪೂರ್ಣ ಮಾಹಿತಿ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಜಿಲ್ಲಾಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: