ಕರ್ನಾಟಕಪ್ರಮುಖ ಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಬಾಲಕಿಗೆ ಅಶ್ಲೀಲ ವಿಡಿಯೋ ಕಳಿಸಿ ಕಿರುಕುಳ : ವ್ಯಕ್ತಿಯ ವಿರುದ್ಧ ದೂರು

ರಾಜ್ಯ(ಬೆಂಗಳೂರು)ಡಿ.21:- ಸಾಮಾಜಿಕ ಜಾಲತಾಣದಲ್ಲಿ ಬಾಲಕಿಗೆ ಅಶ್ಲೀಲ ಫೋಟೋ, ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ.
ಬಾಲಕಿಯ ಪೋಷಕರು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ. ಆನ್ಲೈನ್ ಕ್ಲಾಸ್ ವೇಳೆಯಲ್ಲಿ ಬಾಲಕಿ ಇನ್ ಸ್ಟಾಗ್ರಾಮ್ ನಲ್ಲಿ ಖಾತೆ ಓಪನ್ ಮಾಡಿದ್ದು, ಬಾಲಕಿಗೆ ಓರ್ವ ವ್ಯಕ್ತಿ ಪರಿಚಯವಾಗಿದ್ದಾನೆ. ನಂತರ ವ್ಯಕ್ತಿ ಬಾಲಕಿಗೆ ಅಶ್ಲೀಲ ಫೋಟೋ ವಿಡಿಯೋ ಕಳುಹಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ, ಜತೆಗೆ ಇದೇ ರೀತಿ ಬಾಲಕಿಗೂ ಕೂಡ ಫೋಟೋ ಕಳುಹಿಸಲು ಒತ್ತಡ ಹೇರಿದ್ದ ಎನ್ನಲಾಗಿದೆ.
ಈ ನಡುವೆ ಬಾಲಕಿ ಆತ ಕಳುಹಿಸಿದ್ದ ಅಶ್ಲೀಲ ಫೋಟೋಗಳನ್ನು ಡಿಲೀಟ್ ಮಾಡಿದ್ದಳು. ನಂತರ ಪೋಷಕರು ಆತನನ್ನು ಬ್ಲಾಕ್ ಮಾಡಿದ್ದರು. ಆದರೆ ಆತ ಮತ್ತೆ ನಕಲಿ ಖಾತೆ ಸೃಷ್ಟಿಸಿ ಮತ್ತೆ ಫೋಟೋ ಕಳಿಸುವಂತೆ ಬಾಲಕಿಗೆ ಒತ್ತಡ ಹಾಕಿದ್ದಾನೆ, ಹೀಗಾಗಿ ಪೋಷಕರು ದೂರು ನೀಡಿದ್ದಾರೆ. ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: