ಮೈಸೂರು

ಪತ್ನಿ ಇಲ್ಲದೆ ಮಾನಸಿಕ ಖಿನ್ನತೆಯಿಂದ ಪತಿ ನೇಣಿಗೆ ಶರಣು

ಮೈಸೂರು,ಡಿ.21:- ಪತ್ನಿ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾದ ಪತಿ ನೇಣಿಗೆ ಶರಣಾದ ಘಟನೆ ಸಾತಗಳ್ಳಿಯಲ್ಲಿ ನಡೆದಿದೆ.
ಮೃತನನ್ನು ಶಂಶೀರ್(33) ಎಂದು ಗುರುತಿಸಲಾಗಿದೆ. ಅಶ್ವಿನಿ ಹಾಗೂ ಶಂಶೀರ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಒಂದು ತಿಂಗಳ ಹಿಂದೆ ಪತ್ನಿ ಅಶ್ವಿನಿ ದುಬೈಗೆ ತೆರಳಿದ್ದರು. ಅನ್ಯಧರ್ಮ ವಿವಾಹವಾಗಿದ್ದ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು ಎಂದು ತಿಳಿದು ಬಂದಿದೆ.
ಶಂಶೀರ್ ಹಾಗೂ ಅಶ್ವಿನಿ ಎರಡು ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿ ನಡುವೆ ಅನ್ಯೋನ್ಯತೆ ಕೊರತೆ ಹಿನ್ನಲೆ ದುಬೈನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಶ್ವಿನಿ ತೆರಳಿದ್ದರು.

ಪತ್ನಿ ದೂರವಾದ ಹಿನ್ನಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಶಂಶೀರ್ ನೇಣಿಗೆ ಶರಣಾಗಿದ್ದಾರೆ. ಈ ಪ್ರಕರಣವು ಉದಯಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: