ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ನಗ ನಾಣ್ಯ ಲೂಟಿ

ಮೈಸೂರು,ಡಿ.22:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ನಗನಾಣ್ಯ ದೋಚಿದ ಘಟನೆ ಲಷ್ಕರ್ ಮೊಹಲ್ಲಾದ ಕಬೀರ್ ರಸ್ತೆಯಲ್ಲಿ ನಡೆದಿದೆ.
ಲಷ್ಕರ್ ಮೊಹಲ್ಲಾದ ಕಬೀರ್ ರಸ್ತೆಯ ನಿವಾಸಿ ಮಹಮ್ಮದ್ ಅಯೂಬ್ ಅವರು ಮನೆಗೆ ಬೀಗ ಹಾಕಿಕೊಂಡು ಸಮಾರಂಭವೊಂದಕ್ಕೆ ತೆರಳಿದ್ದರು. ಇದೇ ಸಮಯವನ್ನು ನೋಡಿಕೊಂಡ ಕಳ್ಳರು ಮನೆಯ ಬೀಗ ಮುರಿದು 300ಗ್ರಾಂ ಚಿನ್ನಾಭರಣ, 50ರೇಷ್ಮೆ ಸೀರೆಗಳು ಸೇರಿದಂತೆ ವಿವಿಧ ಉಡುಪುಗಳು, ಟಿವಿ ಸೇರಿದಂತೆ ಅನೇಕ ವಸ್ತುಗಳನ್ನು ಕಳುವು ಮಾಡಿದ್ದಾರೆಂದು ಮಂಡಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: