ಮನರಂಜನೆ

ಕೆಂಪೇಗೌಡ-2 : ನಾಯಕನಾಗಿ ಕೋಮಲ್ ?

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ಕಿಚ್ಚ ಸುದೀಪ್ ನಾಯಕನಾಗಿ ಮಿಂಚಿದ ‘ಕೆಂಪೇಗೌಡ’ ಚಿತ್ರ ಜನಮೆಚ್ಚುಗೆ ಗಳಿಸಿತ್ತು. ಇದೀಗ ನಿರ್ಮಾಪಕ ಶಂಕ್ರಗೌಡ ಅವರು ಕೆಂಪೇಗೌಡ-2 ಚಿತ್ರ ಮಾಡಲು ತಯಾರಿಯಲ್ಲಿದ್ದಾರೆ. ಈಗಾಗಲೇ ಚಿತ್ರದ ಟೈಟಲ್‍ಗಾಗಿ ಹೆಬ್ಬುಲಿ ನಿರ್ಮಾಪಕ ಉಮಾಪತಿ ಜೊತೆ ನಡೆದ ಶೀತಲ ಸಮರವೂ ಅಂತ್ಯವಾಗಿದ್ದು, ನಿರ್ಮಾಪಕರಿಗೆ ದಾರಿ ಸುಗಮವಾಗಿದೆ.

ಸಾಹಸ ಪ್ರಧಾನ ಕಥಾ ಹಂದರವಿದ್ದ ಕೆಂಪೇಗೌಡ ಚಿತ್ರದ ನಾಯಕ ನಟನಾಗಿ ಕಿಚ್ಚ ಸುದೀಪ್ ಅವರ ನಟನೆ ಅಮೋಘವಾಗಿತ್ತು, ಇದೇ ಚಿತ್ರದ ಮುಂದಿನ ಭಾಗದ ನಾಯಕ ನಟನಾಗಿ ಹಾಸ್ಯ ನಟ ಕೋಮಲ್ ಅಭಿನಯಿಸುವರು ಎನ್ನುವುದು ಗಾಂಧಿನಗರದ ಮಾತು. ಬೃಹತ್ ಬಜೆಟ್‍ನ ಚಿತ್ರವಾದ ಕೆಂಪೇಗೌಡ-2 ಚಿತ್ರವು ನಟ ಕೋಮಲ್ ಅವರಿಗೆ ಬಿಗ್ ಬ್ರೇಕ್ ನೀಡುವುದೇ ಎಂಬುದನ್ನು ಕಾದು ನೋಡಬೇಕು.

(ಕೆ.ಎಂ.ಆರ್/ಎನ್‍.ಬಿ.ಎನ್)

Leave a Reply

comments

Related Articles

error: