ಮೈಸೂರು

ಮೈಸೂರು ವಿವಿ ಕುಲಸಚಿವ(ಮೌಲ್ಯಮಾಪನ)ರಾಗಿ ಡಾ.ಎ.ಪಿ.ಜ್ಞಾನಪ್ರಕಾಶ್

ಮೈಸೂರು,ಡಿ.23:- ಮೈಸೂರು ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ಪಿ.ಜ್ಞಾನಪ್ರಕಾಶ್ ಅವರನ್ನು ಕರ್ನಾಟಕ ರಾಜ್ಯ ವಿವಿ ಅಧಿನಿಯಮ 2000ರ ಪ್ರಕರಣ18(1)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಕುಲಸಚಿವರು(ಮೌಲ್ಯಮಾಪನ) ಮೈಸೂರು ವಿವಿ ಇಲ್ಲಿನ ಪ್ರೊ.ಕೆ.ಎಂ.ಮಹಾದೇವನ್ ಕುಲಸಚಿವರು(ಮೌಲ್ಯಮಾಪನ) ಮೈಸೂರು ವಿವಿ ಇವರ ಹುದ್ದೆಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಿಸಿದೆ.
ಮೈಸೂರು ವಿವಿ ಕುಲಸಚಿವರು(ಮೌಲ್ಯಮಾಪನ)ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ.ಕೆ.ಎಂ.ಮಹಾದೇವನ್ ಇವರ ಸೇವೆಯನ್ನು ಕುವೆಂಪು ಇವರ ಸೇವೆಯನ್ನು ಕುವೆಂಪು ವಿವಿ ವಶಕ್ಕೆ ಹಿಂದಿರುಗಿಸಿದೆ.
ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎ.ಪಿ ಜ್ಞಾನಪ್ರಕಾಶ್ ಇವರನ್ನು ಕುಲಸಚಿವ(ಮೌಲ್ಯಮಾಪನ) ಹುದ್ದೆಗೆ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: