ಪ್ರಮುಖ ಸುದ್ದಿಮನರಂಜನೆ

ಬೆಂಗಳೂರಿನ ಹೃದಯಸ್ಥಾನದಲ್ಲಿದ್ದ ಏಷ್ಯಾದ ಅತಿದೊಡ್ಡ ಕಪಾಲಿ ಚಿತ್ರಮಂದಿರ ಇನ್ನು ನೆನಪು ಮಾತ್ರ

ಹಲವಾರು ದಶಕಗಳ ಸಿನಿಮಾ ಪ್ರಿಯರ ಮೆಚ್ಚಿನ ತಾಣವಾಗಿದ್ದ ಬೆಂಗಳೂರಿನ ಕಪಾಲಿ ಚಿತ್ರಮಂದಿರ ಇನ್ನೂ ನೆನಪು ಮಾತ್ರ. ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಾಣದ ಹಿನ್ನೆಲೆಯಲ್ಲಿ ಕಪಾಲಿ ಚಿತ್ರಮಂದಿರವನ್ನು ನೆಲಸಮಗೊಳಿಸಲು ಈ ಜಾಗವನ್ನು ಕೊಂಡುಕೊಂಡ ಮಾಲೀಕರು ಮುಂದಾಗಿರುವುದರ ಬಗ್ಗೆ ಚಿತ್ರರಂಗದ ಹಲವಾರು ನಟರು, ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಈ ಜಾಗವನ್ನು ಬಳಸಿಕೊಂಡು ವಾಣಿಜ್ಯ ಸಂಕೀರ್ಣ ಮತ್ತು ಅದರಲ್ಲಿ ಎರಡು ಪರದೆಗಳ ಮಲ್ಟಿಪ್ಲೆಕ್ಸ್ ಥಿಯೇಟರ್‍ ನಿರ್ಮಾಣವಾಗುತ್ತಿದೆ.

ಬೇರೆ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಚಿತ್ರಮಂದಿರಗಳಿಂದ ಪ್ರೇಕ್ಷಕರು ನಿಧಾನವಾಗಿ ವಿಮುಖರಾಗುತ್ತಿರುವ ಈ ಸಂದರ್ಭದಲ್ಲಿ ಚಿತ್ರಮಂದಿರದ ಕಡೆ ಪ್ರೇಕ್ಷಕನನ್ನು ಸೆಳೆಯುವ ಅವಶ್ಯಕತೆ ಇದೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳಿದ್ದಾರೆ.

ಬೆಂಗಳೂರಿನ ಹೃದಯ ಭಾಗವಾದ ಕೆ.ಜಿ. ರಸ್ತೆ, ಮೆಜೆಸ್ಟಿಕ್‍ ಪ್ರದೇಶದಲ್ಲಿ ಚಿತ್ರಮಂದಿರಗಳು ಕ್ಷಿಣಿಸುತ್ತಿರುವುದು ಕನ್ನಡ ಚಿತ್ರೋದ್ಯಮಕ್ಕೆ ಬಹುದೊಡ್ಡ ಹೊಡೆತ ಎಂದರು.

(ಕೆಎಂಆರ್‍/ಎನ್‍ಬಿಎನ್‍)

Leave a Reply

comments

Related Articles

error: