ದೇಶಪ್ರಮುಖ ಸುದ್ದಿ

ತ್ರಿವಳಿ ತಲಾಖ್ ರದ್ದುಗೊಳಿಸಿದ ಪಕ್ಷದಿಂದ ವಿಚ್ಛೇದನಕ್ಕೆ ಪ್ರಚೋದನೆ : ಸುಜಾತಾ ಮಂಡಲ್ ಕಿಡಿ

ದೇಶ(ಕೋಲ್ಕತ್ತಾ)ಡಿ.24:- ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಬಂಧಗಳು ವೈಯಕ್ತಿಕ ಸಂಬಂಧಗಳ ಮೇಲೆ ಕುಟುಂಬ ನಾಟಕಗಳವರೆಗೆ ಬಂದಿವೆ.
ಪಕ್ಷದ ತಾರತಮ್ಯ ಆರೋಪಿಸಿ ಬಿಜೆಪಿ ಸಂಸದ ಸೌಮಿತ್ರಾ ಖಾನ್ ಅವರ ಪತ್ನಿ ಸುಜಾತಾ ಮಂಡಲ್ ಖಾನ್ ಟಿಎಂಸಿಗೆ ಸೇರಿದ್ದರು. ಇದಾದ ಸ್ವಲ್ಪ ಸಮಯದ ನಂತರ ಸೌಮಿತ್ರಾ ಖಾನ್ ತನ್ನ ಹೆಂಡತಿಗೆ ವಿಚ್ಛೇದನದ ನೋಟೀಸ್ ಕಳಿಸಿದ್ದರು.
ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸುಜಾತಾ ಮಂಡಲ್ ಖಾನ್ ತನ್ನ ಪತಿ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತ್ರಿವಳಿ ತಲಾಖ್ ರದ್ದುಗೊಳಿಸಿದ ಪಕ್ಷವು ಈಗ ನನ್ನ ಪತಿಗೆ ನನ್ನನ್ನು ವಿಚ್ಛೇದನ ನೀಡುವಂತೆ ಕೇಳುತ್ತಿದೆ ಎಂದು ಹೇಳಿದ್ದಾರೆ.
ಸುಜಾತಾ ಮತ್ತು ಸೌಮಿತ್ರಾ ಖಾನ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಚುನಾವಣಾ ಹೋರಾಟದ ಬಿಸಿ ಕೂಡ ಅವರ ವೈಯುಕ್ತಿಕ ಸಂಬಂಧದ ಮೇಲೆ ಪರಿಣಾಮ ಬೀರಿದೆ. ಸುಜಾತಾ ಮಂಡಲ್ ಖಾನ್ ಟಿಎಂಸಿಗೆ ಹೋಗುವುದಕ್ಕೂ ಮುನ್ನ ಅಮಿತ್ ಶಾ ಅವರ ಭೇಟಿಯ ವೇಳೆ ಶುಭೇಂದು ಅಧಿಕಾರಿ ಸೇರಿದಂತೆ ಕೆಲವು ಟಿಎಂಸಿ ನಾಯಕರು ಬಿಜೆಪಿಗೆ ಸೇರಿದರು.
ಸೌಮಿತ್ರಾ ಖಾನ್ ವಿಚ್ಛೇದನ ಪಡೆದ ನಂತರ ಸುಜಾತಾ ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿದ್ದಾರೆ. ” ಯಾವಾಗ ರಾಜಕೀಯವು ನಿಮ್ಮ ವೈಯುಕ್ತಿಕ ಜೀವನದಲ್ಲಿ ಬರಲಿದೆಯೋ ಅದು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನನ್ನ ವಿರುದ್ಧ ಅವರನ್ನು ಪ್ರಚೋದಿಸುತ್ತಿರುವ ಬಿಜೆಪಿಯ ತಪ್ಪು ಜನರೊಂದಿಗೆ ಸೌಮಿತ್ರ ಇದ್ದಾರೆ. ತ್ರಿವಳಿ ತಲಾಖ್ ಅನ್ನು ರದ್ದುಗೊಳಿಸಿದ ಪಕ್ಷವು ಸೌಮಿತ್ರಾಗೆ ನನ್ನನ್ನು ವಿಚ್ನೀಛೇದನ ನೀಡುವಂತೆ ಕೇಳುತ್ತಿದೆ ಎಂದಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: