ದೇಶಪ್ರಮುಖ ಸುದ್ದಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮಾಜಿ ಮುಖ್ಯ ವ್ಯವಸ್ಥಾಪಕರ ಬಂಧನ

ದೇಶ(ನವದೆಹಲಿ)ಡಿ.24:- ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ಮುಖ್ಯ ವ್ಯವಸ್ಥಾಪಕ ಶೈಲೇಂದ್ರ ಕುಮಾರ್ ಉಪಾಧ್ಯಾಯ ಅವರನ್ನು ಬಂಧಿಸಿದೆ.

ಪೊಲೀಸರ ಪ್ರಕಾರ, 2013 ರಲ್ಲಿ ಶೈಲೇಂದ್ರ ಕುಮಾರ್ ಉಪಾಧ್ಯಾಯ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಶಾಖೆಯ ವ್ಯವಸ್ಥಾಪಕರಾಗಿದ್ದಾಗ, ಕೆಲವು ಜನರ ಜೊತೆಗೂಡಿ 2.5 ಕೋಟಿ ರೂ.ಗಳ ಸಾಲವನ್ನು ನೀಡಿದ್ದರು. ಈ ಸಾಲವನ್ನು ನಗದು ಸಾಲವಾಗಿ ನೀಡಲಾಯಿತು. ಸಾಲದ ಹಣವನ್ನು ಹಿಂತೆಗೆದುಕೊಂಡ ನಂತರ, ಕಂಪನಿಯು ಬ್ಯಾಂಕಿನ ಹಣವನ್ನು ಹಿಂದಿರುಗಿಸಲಿಲ್ಲ ಮತ್ತು ನಂತರ 2014 ರಲ್ಲಿ ಸಾಲ ಖಾತೆಯು ಎನ್‌ಪಿಎ ಆಗಿದೆ ಎನ್ನಲಾಗಿದೆ.
ದೆಹಲಿ ಪೊಲೀಸರ ಪ್ರಕಾರ ಬ್ಯಾಂಕ್ ತನಿಖೆಯನ್ನು ಪ್ರಾರಂಭಿಸಿದಾಗ ಕಂಪನಿ ನೀಡಲಾದ ಆಸ್ತಿ ಪತ್ರಗಳು ಎಲ್ಲವೂ ನಕಲಿ ಎಂದು ತಿಳಿದುಬಂದಿದೆ. ಅಲ್ಲದೆ ಕಂಪನಿಯ ಮಾಲೀಕರು ಮತ್ತು ಖಾತೆದಾರರ ವಿಳಾಸಗಳು ಸಹ ನಕಲಿ ಎಂದು ಕಂಡುಬಂದಿದೆ. ಇದರ ನಂತರ ಬ್ಯಾಂಕ್‌ನಿಂದ ಪೊಲೀಸ್ ಗೆ ದೂರು ದಾಖಲಿಸಲಾಗಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: