ಮೈಸೂರು

ಸ್ವಾರ್ಥ ಬಿಟ್ಟು ಪ್ರೀತಿಯಿಂದ ಬಾಳೋಣ : ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಕ್ರಿಸ್ಮಸ್ ಸಂದೇಶ

ಮೈಸೂರು,ಡಿ.23:- ಕೊರೊನಾ ನಡುವೆಯೂ ಎಲ್ಲ ಧರ್ಮದವರು ತಮ್ಮ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ ಅದೇ ರೀತಿ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಲು ಕ್ರೈಸ್ತ ಸಮುದಾಯದವರು ತೀರ್ಮಾನಿಸಿದ್ದಾರೆಂದು ಮೈಸೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ತಿಳಿಸಿದರು.
ತಮ್ಮ ನಿವಾಸದಲ್ಲಿ ಕ್ರಿಸ್ಮಸ್ ಸಂದೇಶ ನೀಡಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿಶ್ವದಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿದ್ದು ಜನರಿಗೆ ಸಂಕಷ್ಟ ತಂದಿಟ್ಟಿದೆ. ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಇಂತಹ ಸಂಕಎಂದುಷ್ಟದ ಸಮಯದಲ್ಲಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸದೆ ಸರಳರೀತಿಯಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಕೊರೋನಾದಂತಹ ಮಹಾಮಾರಿ ಬಂದರೂ ಮನುಷ್ಯರು ಇನ್ನೂ ಸ್ವಾರ್ಥ ಬಿಟ್ಟಿಲ್ಲ. ಪರಸ್ಪರ ಗೌರವ ಇಲ್ಲ. ಪ್ರೀತಿಗೆ ಬೆಲೆಯಿಲ್ಲ. ಈ ಜಗತ್ತು ಕೊರೋನಾ ಮುಕ್ತವಾಗಲಿ ಎಂದು ಪ್ರಾರ್ಥಿಸುವ ಜೊತೆಗೆ ಎಲ್ಲರ ಮನಸ್ಸು ಕೂಡ ಲೋಪಗಳಿಂದ ಮುಕ್ತವಾಗಲಿ ಎಂದು ಪ್ರಾರ್ಥಿಸಬೇಕಿದೆ ಎಂದರು.
ಕ್ರಿಸ್ಮಸ್ ಹಬ್ಬದ ಅಂಗವಾಗಿ ಡಿ.24ರ ರಾತ್ರಿ 11.30ರಿಂದ ಜಾಗರಣೆ ಪೂಜೆ ಆರಂಭವಾಗಿ ರಾತ್ರಿಯಿಡೀ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಡಿ.25ರಂದು ಬೆಳಿಗ್ಗೆ 5ರಿಂದ 9ಗಂಟೆಯವರೆಗೆ ಪ್ರತಿ ಒಂದು ಗಂಟೆ ಅಂತರದಲ್ಲಿ ವಿಶೇಷ ಪ್ರಾರ್ಥನೆ ನೆರವೇರಲಿದೆ. ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ತಿಳಿಸಿದರು.
ಈ ಜಗತ್ತಿನಲ್ಲಿ ನಾವು ಎಷ್ಟು ವರ್ಷ ಬಾಳುತ್ತೇವೆಂಬುದು ಮುಖ್ಯವಲ್ಲ, ಹೇಗೆ ಬಾಳುತ್ತೇವೆ ಎಂಬುದು ಮುಖ್ಯ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: