ಮೈಸೂರು

ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ : ಅಂಬರೀಷ್

ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿತ್ತು. ಅದನ್ನು ಬಿಟ್ಟು ನಾನು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಮಂಡ್ಯ ಶಾಸಕ ಅಂಬರೀಷ್ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸಚಿವ ಸ್ಥಾನ ಕಳೆದುಕೊಂಡಿದ್ದೇನೆ ಎಂದು ನನಗೆ ಮುಖ್ಯಮಂತ್ರಿಗಳ ಮೇಲೆ ಕೋಪವಿಲ್ಲ. ಜನ ನನ್ನನ್ನು ಮುಖ್ಯಮಂತ್ರಿಗಿಂತ ಹೆಚ್ಚು ಚೆನ್ನಾಗಿ ನೋಡಿಕೊಂಡಿದ್ದಾರೆ. ಅದಕ್ಕಿಂತ ಇನ್ನೇನೂ ಬೇಡ ನಾನು ಮೂರು ವರ್ಷ ಸಚಿವನಾಗಿ ಕಾರ್ಯನಿರ್ವಹಿಸಿದ ತೃಪ್ತಿ ನನಗಿದೆ. ಬೇರೆಯವರಿಗೂ ಒಂದು ವರ್ಷ ಸಿಗಲಿ ಎಂದರು.  ಕಾಂಗ್ರೆಸ್ ಪಕ್ಷ ಉಪಚುನಾವಣೆಯಲ್ಲಿ ಗೆದ್ದಿರುವುದು ಖುಷಿ ನೀಡಿದೆ. ಇನ್ನೂ  ಒಂದು ವರ್ಷದ  ಆಡಳಿತ ಬಾಕಿ ಇದೆ. ಜನರು ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತದೆ ಎಂಬ  ವಿಶ್ವಾಸವಿರಿಸಿದ್ದಾರೆ. ಜನರ ನಂಬಿಕೆಯನ್ನು ಹುಸಿಗೊಳಿಸದಂತೆ ನೋಡಿಕೊಳ್ಳಬೇಕು ಎಂದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: