ದೇಶಪ್ರಮುಖ ಸುದ್ದಿ

ಮಂಡ್ಯ : ರಂಗೇರುತ್ತಿರುವ ಕ್ಷೇತ್ರದಲ್ಲಿ ಪೊಲೀಸರಿಂದ ಪಥಸಂಚಲನದ ಜೊತೆಗೆ ಮತ ಜಾಗೃತಿ

ರಾಜ್ಯ(ಮಂಡ್ಯ)ಡಿ.24:- ಕೆ ಆರ್ ಪೇಟೆ ತಾಲೂಕಿನ ಸರ್ವ ಪಕ್ಷದ ರಾಜಕೀಯ ನಾಯಕರಿಗೆ ಪ್ರತಿಷ್ಠೆ ಕಣವಾದ ಕಿಕ್ಕೇರಿ ಹೋಬಳಿಯ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.
ಕಿಕ್ಕೇರಿ ಪೊಲೀಸ್ ಠಾಣೆಯ ಪಿಎಸ್ ಐ ನವೀನ್ ಅವರ ನೇತೃತ್ವದಲ್ಲಿ ಪ್ರತಿಯೊಬ್ಬ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ, ನಿಮ್ಮ ರಕ್ಷಣೆಗೆ ನಾವಿದ್ದೇವೆ ಎನ್ನುವ ಸಂದೇಶ ದೊಡನೆ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿದರು.
ಠಾಣೆಯ ಸಬ್ ಇನ್ಸ್ಪೆಕ್ಟರ್ ನವೀನ್ ಕೆ. ಸೇರಿದಂತೆ 40ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಕಿಕ್ಕೇರಿ ಪಟ್ಟಣದ ಪ್ರಮುಖ ಮುಖ್ಯರಸ್ತೆಗಳಲ್ಲಿ ಪಥಸಂಚಲನ ನಡೆಸಿ ಯಾವುದೇ ಆಸೆ, ಆಮಿಷಕ್ಕೆ ಒಳಗಾಗದೆ ಅಕ್ರಮ ಮತದಾನ ತಡೆದು ನಿಷ್ಪಕ್ಷಪಾತವಾಗಿ ನಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ಮುಂದಾಗಬೇಕು ಎಂದು ಜಾಗೃತಿ ಮತ ಮೂಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: