ಲೈಫ್ & ಸ್ಟೈಲ್

ಜೊತೆಯಾಗಿ ಸೇವಿಸಿದರೆ ಅಪಾಯ ಗ್ಯಾರಂಟಿ!

ಆಯುರ್ವೇದ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಸಾಂಚಿಯ ಬೌದ್ಧ, ಭಾರತೀಯ ಜ್ಞಾನ ವಿಶ್ವವಿದ್ಯಾಲಯ ವಿರುದ್ಧ ಗುಣಗಳನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದಾಗ ಆರೋಗ್ಯಕ್ಕೆ ಹಾನಿಯುಂಟಾಗಬಹುದು ಎಂದಿದೆ. ಸೈಡ್ ಎಫೆಕ್ಟ್ ಕೂಡಾ ಆಗಬಹುದು ಎಂದಿದ್ದಾರೆ. ಅಂಥಹ ಆಹಾರ ಪದಾರ್ಥಗಳನ್ನು ಅಪ್ಪಿತಪ್ಪಿಯೂ ಜೊತೆಯಲ್ಲಿ ಸೇವಿಸಬಾರದು. ಹಾಗಾದರೆ ಯಾವುದದು?

ಉಪ್ಪಿನ ಜೊತೆ ಹಾಲು : ಹಾಲು ಕುಡಿಯುವಾಗ ಉಪ್ಪನ್ನು ಹೊಂದಿರುವ ತಿನಿಸುಗಳನ್ನು ಸೇವಿಸಬಾರದು. ಇದರಿಂದ ಹಾಲಿನಲ್ಲಿರುವ ಪ್ರೋಟೀನ್ ಗಳ ಉಪಯೋಗ ಕಡಿಮೆಯಾಗಲಿದೆ. ತ್ವಚೆಯ ಸಮಸ್ಯೆಯು ಕಾಡಲಿದೆ.

ಮೊಸರಿನ ಜೊತೆ ಹಾಲು : ಆಯುರ್ವೇದದ ಪ್ರಕಾರ ಎರಡೂ ವಿರುದ್ಧವಾದ ಆಹಾರವಾಗಿದೆ. ಇದರಿಂದ ಡಯರಿಯಾ ಆಗುವ ಸಾಧ್ಯತೆಯಿದೆ.

ಮೊಸರು ಮತ್ತು ಹಣ್ಣು : ಎರಡರಲ್ಲೂ ಬೇರೆ ಬೇರೆ ಎಂಜಾಯಿಮ್ಸ್ ಗಳಿದ್ದು, ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಕಫ, ಶೀತ, ನೆಗಡಿ ಮತ್ತು ಎಸಿಡಿಟಿ ಸಮಸ್ಯೆಗಳು ತಲೆದೋರಲಿವೆ.

ಹಾಲಿನ ಜೊತೆ ಮೀನು: ಇವೆರಡು ವಿರುದ್ಧ ಪ್ರಕೃತಿಯ ಆಹಾರವಾಗಿದೆ. ಎರಡನ್ನೂ ಒಟ್ಟಿಗೆ ಸೇವಿಸಿದಾಗ ತ್ವಚೆ ಸಮಸ್ಯೆ ತಲೆದೋರಲಿದೆ.

ಸಿಹಿಯ ಜೊತೆ ಹುಳಿ :ಸಿಹಿ ಮತ್ತು ಹುಳಿ ಎರಡೂ ಹಣ್ಣುಗಳಲ್ಲಿ ಅಡಕವಾಗಿರುವ ಅಂಶಗಳು ಬೇರೆ, ಬೇರೆಯಾಗಿವೆ. ಎರಡೂ ಒಟ್ಟಿಗೆ ಸೇರಿದರೆ ಲೂಸ್ ಮೋಶನ್ ಆಗುವ ಸಾಧ್ಯತೆಗಳಿವೆ.

ತುಪ್ಪದ ಜೊತೆ ಜೇನು : ಚರಕ ಸಂಹಿತೆಯ ಪ್ರಕಾರ ಇವೆರಡನ್ನು ಸಮಪ್ರಮಾಣದಲ್ಲಿ ಸೇವಿಸಿದರೆ ವಿಷವಾಗುವ ಸಾಧ್ಯತೆಯಿದೆ.


ಘರಂ ಮಸಾಲೆ ಜೊತೆ ಹಾಲು
: ಹಾಲು ಶೀತ ಪ್ರಕೃತಿಯದಾಗಿದೆ. ಘರಂ ಮಸಾಲೆ ಉಷ್ಣ ಪ್ರಕೃತಿಯದ್ದು. ಎರಡನ್ನೂ ಒಟ್ಟಿಗೆ ಸೇವಿಸಿದರೆ ಹೊಟ್ಟೆ ಕೆಡುವ ಸಾಧ್ಯತೆಯಿದೆ.

ಅದರಿಂದ ಆದಷ್ಟು ಈ ಆಹಾರಗಳನ್ನು ಜೊತೆ ಜೊತೆಯಾಗಿ ಸೇವಿಸದೇ ಆರೋಗ್ಯವನ್ನು ಕಾಪಾಡಿಕೊಳ್ಳಿ. (ಎಸ್.ಎಚ್)

 

 

 

Leave a Reply

comments

Related Articles

error: