ಕರ್ನಾಟಕಪ್ರಮುಖ ಸುದ್ದಿಮೈಸೂರು

ಅ.1ರಿಂದ ದಸರಾ ಫಲಪುಷ್ಪ ಪ್ರದರ್ಶನ ದೇಶದ ಮುಖ್ಯ ಸ್ಮಾರಕಗಳ ಅನಾವರಣ

ram_6183-webಮೈಸೂರು ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘದ ಜಂಟಿ ಆಶ್ರಯದಲ್ಲಿ ಅ.1 ರಿಂದ 12ರವರೆಗೆ ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದ್ದು. ಅ.1ರಂದು ಸಂಜೆ 4:30ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡುವರು. ಸಂಸದರಾದ ಪ್ರತಾಪ್ ಸಿಂಹ, ಧ್ರುವನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಚಿವರಾದ ಎಚ್.ಎಸ್.ಮಹದೇವಪ್ರಸಾದ್, ತನ್ವೀರ್ ಸೇಠ್, ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಸೋಮಶೇಖರ್, ಶ್ರೀನಿವಾಸ ಪ್ರಸಾದ್, ಸಾ.ರಾ.ಮಹೇಶ್, ಮೇಯರ್ ಬಿ.ಎಲ್.ಭೈರಪ್ಪ, ಜಿ.ಪಂ.ಅಧ್ಯಕ್ಷೆ ನಯಿಮಾಸುಲ್ತಾನ ನಜೀರ್ ಅಹಮದ್ ಭಾಗವಹಿಸುವರು ಎಂದು ಸುದ್ಧಿಗೋಷ್ಠಿಯಲ್ಲಿ ಸಿಇಒ ಶಿವಶಂಕರ್ ತಿಳಿಸಿದರು.

ಫಲಪುಷ್ಪ ಪ್ರದರ್ಶನಕ್ಕೆ ಕನ್ನಡ ಚಲನಚಿತ್ರ ನಟರು ಮೆರುಗು ನೀಡಲಿದ್ದಾರೆ. ದಿನಿ ಸಿನಿ ಕ್ರಿಯೇಷನ್ಸ್ ಸಹಯೋಗದಲ್ಲಿ ಚಲನಚಿತ್ರ ತಾರೆಯರು ಪ್ರಚಾರ ನೀಡಲಿದ್ದಾರೆ. ನಟ ರಮೇಶ್ ಅರವಿಂದ್, ಸಾಯಿಕುಮಾರ್, ರಚಿತಾ ರಾಮ್, ನಿಧಿ ಸುಬ್ಬಯ್ಯ ಸಿಂಪಲ್ಲಾಗ್ ಒಂದು ಲವ್ ಸ್ಟೋರಿಯ ಪ್ರವೀಣ್ ಸೇರಿದಂತೆ ಇನ್ನೂ ಅನೇಕರು ಪ್ರಚಾರ ನೀಡಲಿದ್ದು ಈ ಸಂದರ್ಭದಲ್ಲಿ ಪ್ರಗತಿಪರರನ್ನು ಸನ್ಮಾನಿಸುವುದು ಹಾಗೂ ಬಡ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ಧನ ಸಹಾಯ ನೀಡಲಾಗುವುದು. ದಸರಾ ಫಲಪುಷ್ಪ ಪ್ರದರ್ಶನ ಕುಪ್ಪಣ್ಣ ಪಾರ್ಕ್ ಸೇರಿದಂತೆ ಟೌನ್ ಹಾಲ್, ಜಿಲ್ಲಾಧಿಕಾರಿ ಕಚೇರಿ ಬಳಿಯ ಗೊರ್ಡನ್ ಪಾರ್ಕ್, ಲಲಿತ್ ಮಹಲ್ ಬಳಿಯಿರುವ ಲಲಿತ ಉದ್ಯಾನವನದಲ್ಲಿ ಆಯೋಜಿಸಲಾಗಿದೆ. ಊಟಿಯಿಂದ ಸುಮಾರು 2 ಲಕ್ಷ ರೂ. ಹೂವು ತರಿಸಲಾಗುತ್ತಿದೆ. ಜತೆಗೆ 35 ಸಾವಿರ ಹೂ ಕುಂಡ ಪ್ರದರ್ಶನದಲ್ಲಿ ಕಾಣಬಹುದು.

ಫಲಪುಷ್ಪ ಪ್ರದರ್ಶನದಲ್ಲಿ ಸಾರ್ವಜನಿಕರನ್ನು ಸೆಳೆಯಲು  ಕೈತೋಟ, ತಾರಸಿ ತೋಟ, ಮನೆಯ ಮುಂದಿನ ಕನಸಿನ ಉದ್ಯಾನವನ, ಗೇಟ್ ವೇ ಆಫ್ ಇಂಡಿಯಾ, ಯುದ್ಧ ವಿಮಾನ ತೇಜಸ್, ಮಕ್ಕಳ ಉದ್ಯಾನವನ, ವಿಂಟೇಜ್ ಕಾರ್, ಕುದರೆ ಟಾಂಗಗಾಡಿ, ಸಂಗೀತ ನೃತ್ಯ ಕಾರಂಜಿ, ಶ್ಯಾವಿಗೆಯಲ್ಲಿ ಅಲಂಕರಸಿ ಗಣ್ಯರ ಪ್ರತಿಮೆಗಳ ಹೂವಿನ ಅಲಂಕಾರ, ತರಕಾರಿ ಕೆತ್ತನೆ ಮತ್ತು ಅನುಪಯುಕ್ತ ವಸ್ತುಗಳನ್ನು ಬಳಸಿ ಉದ್ಯಾನವನಕ್ಕೆ ಒತ್ತು ನೀಡಲಾಗಿದ್ದು ಸಾರ್ವಜನಿಕರಿಂದ ಉತ್ತಮ ಬೇಡಿಕೆಯಿದೆ, ಎಂದು ತಿಳಿಸಿದರು.

ಸ್ಪರ್ಧೆಗಳು : ಕರ್ಬನ್ ಪಾರ್ಕ್ ಆವರಣದಲ್ಲಿ ಅ.2ಕ್ಕೆ ಪುಷ್ಪ ರಂಗೋಲಿ. ಅ.3ಕ್ಕೆ ಇಕೆಬಾನ ಅ.4ಕ್ಕೆ ಭಾರತೀಯ ಪುಷ್ಪಕಲಾ, ಅ.5ಕ್ಕೆ ತರಕಾರಿ ಕೆತ್ತನೆ, ಅ.6ಕ್ಕೆ ಬೋನ್ಸಾಯ್ ಗಿಡಗಳ ಸ್ಪರ್ಧೆ, ಅ.7ಕ್ಕೆ ಚಿತ್ರಕಲಾ, ಅ.8ಕ್ಕೆ ಪರಿಸರ ಛಾಯಾಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಬಿಇಎಂಎಲ್, ಬ್ರೇಕ್ ಇಂಡಿಯಾ, ಟೈಟಾನ್ ವಾಲ್ಸ್, ಜೆ.ಕೆ.ಟೈರ್ಸ್, ಅರಮನೆ ಮಂಡಳಿ, ಮೈಸೂರು ಮಹಾನರ ಪಾಲಿಕೆ, ಭಾರತೀಯ ಹಾಗೂ ಜೆ.ಎಸ್.ಎಸ್. ಆಯುರ್ವೇದ ಕಾಲೇಜುಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ವಿವಿಧ ಜಾತಿಯ ಹೂವಿನ ಅಲಂಕಾರ, ತರಕಾರಿ ಕುಂಡಗಳ ಜೋಡಣೆ ಮಾಡುವರು. ಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ತಿಂಡಿ ತಿನಿಸಿನ ಮಳಿಗೆಗಳನ್ನು ಹಾಕಲಿದ್ದು ಸಾರ್ವಜನಿಕರು ವಿವಿಧ ಬಗೆಯ ಆಹಾರದ ರುಚಿ ನೋಡಬಹುದು.

Leave a Reply

comments

Related Articles

error: