ಪ್ರಮುಖ ಸುದ್ದಿಮನರಂಜನೆ

ಕ್ರಿಕೆಟ್‍ಗಿಂತಲೂ ಅಭಿನಯ ಕಷ್ಟವೆಂದ ತೆಂಡೂಲ್ಕರ್ ; ತೆರೆಗೆ ಬರಲು ಸಿದ್ಧವಾಗುತ್ತಿದೆ ಸಚಿನ್ ಜೀವನಾಧಾರಿತ ಚಿತ್ರ

ನಟನೆ ಎಂಬುದು ನಾವು ಅಂದುಕೊಂಡಷ್ಟು ಸುಲಭವಲ್ಲ, ಕ್ರಿಕೆಟ್ ಆಡುವುದಕ್ಕಿಂತಲೂ ನಟನೆ ತುಂಬಾ ಕಷ್ಟ ಹಾಗೂ ಕಠಿಣ, ನಾನು ಮಾಡಿದ ಸಾಧನೆಯನ್ನು ಕ್ರಿಕೆಟ್ ಕ್ಯಾಮಾರ್ ಸೆರೆ ಹಿಡಿದಿದೆ. ಚಿತ್ರಕ್ಕಾಗಿ ಅಭಿನಯಿಸುವುದು ಕಷ್ಟಸಾಧ್ಯವೆಂದು ಪ್ರತಿಕ್ರಿಯೆ ನೀಡಿದ್ದಾರೆ ಸಚಿನ್ ತೆಂಡೂಲ್ಕರ್.

ಕ್ರಿಕೆಟ್ ದಂತ ಕಥೆ, ಕ್ರಿಕೆಟ್ ದೇವರೆಂದೇ ಖ್ಯಾತನಾಮರಾಗಿರುವ ಸಚಿನ್ ತೆಂಡೊಲ್ಕರ್ ಅವರ ಜೀವನಾಧರಿತ ‘ಬಿಲಿಯನ್ ಡ್ರೀಮ್ಸ್’ ಚಿತ್ರವು ತಯಾರಿಕೆ ಹಂತದಲ್ಲಿದ್ದು ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಗೊಂಡಿದ್ದು, ಪೋಸ್ಟರ್ ಅತ್ಯಂತ ಕುತೂಹಲ ಮೂಡಿಸಿದೆ.

ಚಿತ್ರದ ಪೋಸ್ಟರ್.

ಕ್ರಿಕೆಟ್ ಹೀರೋ ಸಚಿನ್ ತೆಂಡೊಲ್ಕರ್ ಅವರ ಸಾಧನೆ ಹಾಗೂ ಖಾಸಗಿ ಬದುಕಿನ ಕಥೆಯನ್ನೊಳಗೊಂಡ ಚಿತ್ರವನ್ನು ನಿರ್ದೇಶಕ ಜೇಮ್ಸ್ ಎರಿಕ್ಸನ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಹಿನ್ನಲೆಗಾಯಕ ಸೋನು ನಿಗಮ್ ಅವರೊಂದಿಗೆ ಹಾಡೊಂದನ್ನು ಸಚಿನ್ ಹಾಡಿದ್ದಾರೆ.

ಬಿಡುಗಡೆಯಾಗಿರುವ ಪೋಸ್ಟರ್‍ರ್‍ನಲ್ಲಿ ಸಚಿನ್ ಕಾಲೇಜು ಜೀವನ, ಸೆಂಚುರಿ ಹೊಡೆದ ಸಂಭ್ರಮ, ಏಳು-ಬೀಳುಗಳು, ಸೋಲು-ಗೆಲುವಿನ ಸವಾಲುಗಳು, ಖಾಸಗಿ ಬದುಕು ಸೇರಿದಂತೆ ಹಲವಾರು ನೆನಪಿನ ಬುತ್ತಿಯನ್ನು ಚಿತ್ರದಲ್ಲಿ ಬಿಡಿಸಿಡಲಾಗುವುದು.

ಪಾದರ್, ಬ್ರದರ್, ಪ್ರ್ಯಾಕ್ಟೀಸ್, 99, ಹರ್ಟ್, ಡಿಫೀಟ್, ಫ್ಯಾನ್ಸ್, ಕೋಚ್, ಪ್ರೆಷರ್, ಇಂಜೂರೀಸ್ ಮತ್ತು ಬೌನ್ಸರ್ಸ್ ಸೇರಿದಂತೆ ಕ್ರಿಕೆಟಿಗರು ಹೆಚ್ಚಾಗಿ ಬಳಸುವ ಪದಗಳು ಚಿತ್ರದ ಪೋಸ್ಟರ್‍ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಕಥಾಹಂದರದ ಹಿಂಟ್ ನೀಡಿವೆ.

ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರು “ಕಮ್.. ಎಕ್ಸಿಪೀರಿಯನ್ಸ್ ಮೈ ಜರ್ನಿ ಅಂಡ್ ಆಫ್ ದ 22 ಇಯರ್ಸ್’ ಎಂದು ಟ್ವಿಟರ್‍ ಮಾಡಿದ್ದಾರೆ. ಏ.13, ಗುರುವಾರದಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಚಿತ್ರದ ಹಾಡನ್ನು ಸಂಯೋಜಿಸಿದ್ದಾರೆ. “ಎಂ.ಎಸ್.ಧೋನಿ – ದಿ ಅನ್‍ಟೋಲ್ಡ್‍ ಸ್ಟೋರಿ” ನಂತರ ಮತ್ತೊಬ್ಬ ಕ್ರಿಕೆಟಿಗನ ಜೀವನಾಧಾರಿತ ಸಿನಿಮಾ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ.

(ಕೆ.ಎಂ.ಆರ್‍/ಎನ್‍.ಬಿ.ಎನ್‍)

Leave a Reply

comments

Related Articles

error: