ದೇಶಪ್ರಮುಖ ಸುದ್ದಿ

ಟ್ವೀಟರ್ ನಲ್ಲಿ ಮತ್ತೊಮ್ಮೆ ರಾಜಕೀಯ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಪ್ರಧಾನಿ ಮೋದಿ

ದೇಶ(ನವದೆಹಲಿ)ಡಿ.25:- ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂದು ಪ್ರಪಂಚದಾದ್ಯಂತ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅತ್ಯಂತ ಜನಪ್ರಿಯ ಸಾಧನಗಳಾಗಿವೆ. ಪ್ರತಿಯೊಬ್ಬರೂ ಈ ವೇದಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಈ ವೇದಿಕೆಯಲ್ಲಿ ದೇಶದ ಸೆಲೆಬ್ರಿಟಿಗಳು, ನಾಯಕರು ಮತ್ತು ಕ್ರೀಡಾಪಟುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋ ಮಾಡಲಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶ ಮತ್ತು ವಿದೇಶಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಲ್ಲಿರುತ್ತಾರೆ. ವಾಸ್ತವವಾಗಿ ಭಾರತೀಯ ಟ್ವಿಟರ್ ಚಾರ್ಟ್ ನಲ್ಲಿ ಪ್ರಧಾನಿ ಮೋದಿಯವರು ಪ್ರಥಮ ಸ್ಥಾನದಲ್ಲಿದ್ದಾರೆ.
ಸಾಮಾಜಿಕ ಮಾಧ್ಯಮ ವಿಶ್ಲೇಷಣಾ ಸಂಸ್ಥೆ ಟ್ವಿಟ್ಟೀಟ್ ಟ್ವಿಟರ್ ಕ್ರಿಯಾಶೀಲತೆಯ ಕುರಿತು ನವೆಂಬರ್ 2020 ರ ವರದಿಯನ್ನು ಬಿಡುಗಡೆ ಮಾಡಿದೆ. ಇದು ರಾಜಕೀಯ, ಬಾಲಿವುಡ್, ಪತ್ರಿಕೋದ್ಯಮ, ವ್ಯವಹಾರ, ಲೇಖನಗಳು ಮತ್ತು ಕ್ರೀಡೆ ಸೇರಿದಂತೆ ಒಟ್ಟು 20 ವಿಭಾಗಗಳನ್ನು ಹೊಂದಿದೆ. ಬಳಕೆದಾರರಿಂದ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಅವರ ಡೇಟಾವನ್ನು ಸಿದ್ಧಪಡಿಸಲಾಗಿದೆ. ಈ ರಾಜಕೀಯ ವಿಭಾಗದಲ್ಲಿ ಪ್ರಧಾನಿ ಮೋದಿಯವರ ಟ್ವಿಟ್ಟರ್ ಎಂಗೇಜ್ ಮೆಂಟ್ ಅಂದರೆ ಸಕ್ರಿಯತೆ ಅತಿ ಹೆಚ್ಚು 76,65,669 ಎಂದು ಹೇಳಲಾಗಿದೆ.
ಅಕ್ಟೋಬರ್ನಲ್ಲಿ ಮೋದಿಯವರು ಪ್ರಥಮ ಸ್ಥಾನದಲ್ಲಿದ್ದರು. ಈ ವಿಭಾಗದ ಹೊಸ ಪಟ್ಟಿಯಲ್ಲಿ ಪಿಎಂ ಮೋದಿಯ ನಂತರ ಗೃಹ ಸಚಿವ ಅಮಿತ್ ಶಾ ಎರಡನೇ ಸ್ಥಾನದಲ್ಲಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೂರನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್ ನ ರಾಹುಲ್ ಗಾಂಧಿ ಅಕ್ಟೋಬರ್ನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ಹೊಸ ವರದಿಯ ಪ್ರಕಾರ ರಾಹುಲ್ ಗಾಂಧಿ ಈಗ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ರಾಹುಲ್ ನಂತರ ಆರ್ ಜೆಡಿಯ ತೇಜಶ್ವಿ ಯಾದವ್ ಐದನೇ ಸ್ಥಾನದಲ್ಲಿದ್ದಾರೆ. ಈ ಭಾರತೀಯ ಟ್ವಿಟರ್ ಚಾರ್ಟ್ ನಲ್ಲಿ ಅಗ್ರ -10 ರಾಜಕಾರಣಿಗಳಲ್ಲಿ 7 ಮಂದಿ ಬಿಜೆಪಿ ನಾಯಕರು ಎಂಬುದು ಗಮನಾರ್ಹ ಸಂಗತಿಯಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: