ದೇಶಪ್ರಮುಖ ಸುದ್ದಿ

ದೇಶದಲ್ಲಿ 24 ಗಂಟೆಗಳಲ್ಲಿ 22 ಸಾವಿರ ಹೊಸ ಕೊರೋನಾ ಪ್ರಕರಣ

ದೇಶ(ನವದೆಹಲಿ)ಡಿ.26:- ಕೊರೋನಾ ಸೋಂಕಿನ ಸಂದರ್ಭದಲ್ಲಿ ಸದ್ಯ ಭಾರತದ ಪರಿಸ್ಥಿತಿ ಸುಧಾರಿಸುತ್ತಿದೆ. ದೇಶದಲ್ಲಿ ಸತತ ಆರನೇ ದಿನಕ್ಕೆ 25 ಸಾವಿರಕ್ಕಿಂತ ಕಡಿಮೆ ಕೊರೋನಾ ಪ್ರಕರಣಗಳು ಮತ್ತು ಸತತ 15 ನೇ ದಿನಕ್ಕೆ 30 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ, ಹೊಸದಾಗಿ 22,273 ಕೊರೋನಾ ಸೋಂಕಿತರು ಕಂಡು ಬಂದಿದ್ದಾರೆ. ಅದೇ ವೇಳೆ ಕೊರೋನಾದಿಂದ 251 ಮಂದಿ ಸಾವನ್ನಪ್ಪಿದ್ದಾರೆ. ಗುಡ್ ನ್ಯೂಸ್ ಏನೆಂದರೆ ಕೊನೆಯ ದಿನ 22,274 ರೋಗಿಗಳು ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ.
ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಒಟ್ಟು ಕೊರೋನಾ ಪ್ರಕರಣಗಳು 1 ಕೋಟಿ 69,000 ಕ್ಕೆ ಏರಿದೆ. ಈ ಪೈಕಿ ಒಂದು ಲಕ್ಷ 47 ಸಾವಿರ 343 ಜನರು ಈವರೆಗೆ ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳು 2 ಲಕ್ಷ 81 ಸಾವಿರವಿದೆ. ಈವರೆಗೆ ಒಟ್ಟು 97 ಲಕ್ಷ 40 ಸಾವಿರ ಮಂದಿ ಚೇತರಿಸಿಕೊಂಡಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಡಿಸೆಂಬರ್ 25 ರವರೆಗೆ ಕೊರೋನಾ ವೈರಸ್ಗಾಗಿ ಒಟ್ಟು 16.71 ಮಿಲಿಯನ್ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅದರಲ್ಲಿ 8.53 ಲಕ್ಷ ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಯಿತು. ದೇಶದಲ್ಲಿ ಸಕಾರಾತ್ಮಕ ದರವು ಶೇಕಡಾ 7 ಇದೆ. 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ವೈರಸ್ ನ 20,000 ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಕೊರೋನಾ ವೈರಸ್ ನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇರಳ ಮತ್ತು ಮಹಾರಾಷ್ಟ್ರವು 40 ಪ್ರತಿಶತದಷ್ಟಿದೆ. (ಏಜನ್ಸೀಸ್,ಎಸ್.ಎಚ್)

Leave a Reply

comments

Related Articles

error: