ಕರ್ನಾಟಕಕ್ರೀಡೆಪ್ರಮುಖ ಸುದ್ದಿ

ದಾಖಲೆಗಳನ್ನು ಮುರಿದ ಮಯಾಂಕ್ : ಬೆಳಗಾವಿ ಪ್ಯಾಂಥರ್ಸ್ ಸೆಮಿಪೈನಲ್ ಗೆ

ಹುಬ್ಬಳ್ಳಿ. ಸೆ.29 ಬೆಳಗಾವಿ ಪ್ಯಾಂಥರ್ಸ್ ನ ಆರಂಭಿಕ ಬ್ಯಾಟ್ಸ್ ಮನ್ ಮಯಾಂಕ್ ಅಗರವಾಲ್ನ ವೇಗದ ಶತಕದಿಂದಾಗಿ  ಬೆಳಗಾವಿ ಪ್ಯಾಂರ್ಥಸ್ ಕೆ.ಪಿ.ಎಲ್.ಟಿ.20 ಕ್ರಿಕೆಟ್ ಪಂದ್ಯಾವಳಿಯ ಸೆಮಿ ಫೈನಲ್ ಗೆ ಲಗ್ಗೆ ಹಾಕಿದ್ದಾರೆ.

ಸೈಕಲ ಪ್ಯೂರ್ ಅಗರಬತ್ತಿ ಪ್ರಯೋಜಕತ್ವದ ಟಿ.20 ಕಾರ್ಬನ್ ಕೆ.ಪಿ.ಎಲ್ ಪಂದ್ಯಯೂ ಹುಬ್ಬಳ್ಳಿಯ ರಾಜನಗರದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಬೆಳಗಾವಿ vs ಮಂಗಳೂರು ಯುನೈಟೆಡ್ ನಡುವೆ ಜರುಗಿದ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ಕೇವಲ 45  ಎಸೆತಗಳಲ್ಲಿ 6 ಸಿಕ್ಸರ್ಸ್, 15 ಬೌಂಡರಿಯೊಂದಿಗೆ ವೇಗದ ಶತಕ ಸಿಡಿಸಿ ದಾಖಲೆ ಬರೆದರು. ಔಟಾಗದೆ 119 ರನ್ ಗಳಿಸಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಈ ದಾಖಲೆಯು ಇಲ್ಲಿಯವರೆಗೆ ಮನೀಶ್ ಪಾಂಡೆಯವರದಾಗಿತ್ತು (ಬೆಳಗಾವಿ ಪ್ಯಾಂಥರ್ಸ್) ಮಂಗಳೂರು ಯುನೈಟೆಡ್ ವಿರುದ್ಧ ನಡೆದ ಪಂದ್ಯದಲ್ಲಿ ಮಯಾಂಕ್ ಹಿಂದಿನ ಮೂರು ದಾಖಲೆಗಳನ್ನು ಅಳಿಸಿ ಹಾಕಿ ನೂತನ ದಾಖಲೆಗಳನ್ನು ಸೃಷ್ಠಿಸಿ ಅತ್ಯಧಿಕ 119 ರನ್ ಗಳಿಸುವ ಮೂಲಕ ಕೆ.ಪಿ.ಎಲ್ ನ ಗರಿಷ್ಠ ಮೊತ್ತದ ವೈಯಕ್ತಿಕ ದಾಖಲೆ ನಿರ್ಮಿಸಿದ್ದಾರೆ.
ಬೆಳಗಾವಿ ಪ್ಯಾಂಥರ್ಸ್ ಆರಂಭಿಕ ಬ್ಯಾಟ್ಸ್ ಮನ್ ಗಳಾದ ಮಯಾಂಕ್ ಅಗರ್ ವಾಲ್- ಅನುರಾಗ್ ಬಾಜಪೇಯಿ ಭರ್ಜರಿ ಜೊತೆಯಾಟದಲ್ಲಿ ಮೊದಲ ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದರು. ಮಂಗಳೂರು ಯುನೈಟೆಡ್ ವಿರುದ್ಧ 15 ಓವರ್ ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ 1 ವಿಕೆಟ್ ಗೆ 175 ರನ್ ಗಳಿಸಿ ಮಂಗಳೂರಿಗೆ ಸವಾಲಿನ ಗುರಿ ನೀಡಿದರು.

ಮಂಗಳೂರು ಯುನೈಟೆಡ್ ನ ವಿಶ್ವನಾಥನ್ ಕಠಿಣ ಸ್ಪರ್ಧೆ ನೀಡಿದರೊಂದಿಗೆ, 3 ಸಿಕ್ಸರ್ಸ್, 3 ಬೌಂಡರಿಗಳೊಂದಿಗೆ 46 ರನ್ ಮಾಡಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡುವುದರೊಳಗೆ ನಿರ್ಗಮಿಸಿದರು. ತಂಡವು 14.1 ಓವರ್ ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 137 ರನ್ ಗಳಿಸಿ ಪರಾಭವ ಹೊಂದಿತು.

ಸಂಕ್ಷಿಪ್ತ ಸ್ಕೋರ್ : ಬೆಳಗಾವಿ ಪ್ಯಾಂಥರ್ಸ್ :  15 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 175 ರನ್, (ಮಯಾಂಕ್ ಅಗರ್ ವಾಲ್ 119. ಅನುರಾಗ್ ಬಾಜಪೇಯಿ 51),

ಮಂಗಳೂರು ಯುನೈಟೆಡ್ : 14.1 ಓವರ್ ಗಳಲ್ಲಿ 137 ರನ್ ಗಳು. ಆಲ್ ಔಟ್. (ಎಂ.ವಿಶ್ವನಾಥನ್ 45, ರೋಹಿತ್ ಮೋರೆ 35, ಕರುಣ್ ನಾಯರ್ 26, ವಿನಯ್ ಕುಮಾರ್ 2/13, ಅಭಿಷೇಕ್ ಸ್ಕುಜಾ 3/16, ಅವಿಶೇಖ್ ಸಿನ್ಹಾ 2/29, ಸಿಕೆ.ಅಕ್ಷಯ್ 3/21) 39 ರನ್ ಗಳಿಂದ ಬೆಳಗಾವಿ ಪ್ಯಾಂಥರ್ಸ್ ವಿಜೇತವಾಯಿತು. (ವಿ.ಜಯದೇವನ್ ನಿಯಮದಂತೆ)

ಪಾಯಿಂಟ್ಸ್ ಟೈಮ್ ಟೇಬಲ್ ಬೆಳಗಾವಿ vs ಮಂಗಳೂರು ಯುನೈಟೆಡ್

ತಂಡ ಪಂದ್ಯಗಳು ಗೆಲುವು ಸೋಲು ಟೈ ಎನ್.ಆರ್. ಪಿಟಿಎಸ್ ಎನ್.ಆರ್.ಆರ್
ಮೈಸೂರು ವಾರಿಯರ್ಸ್ 6 6 0 0 0 12 +1.736
ಬೆಳಗಾವಿ ಪ್ಯಾಂಥರ್ಸ್ 7 4 3 0 0 8 +0.827
ಬಳ್ಳಾರಿ ಟಸ್ಕರ್ಸ್ 7 4 3 0 0 8 +0.780
ಹುಬ್ಬಳ್ಳಿ ಟೈಗರ್ಸ್ 6 4 2 0 0 8 +0.171
ಬಿಜಾಪುರ ಬುಲ್ಸ್ 7 3 3 0 1 7 +1.023
ನಮ್ಮ ಶಿವಮೊಗ್ಗ 6 3 3 0 0 6 -0.594
ಮಂಗಳೂರು ಯುನೈಟೆಡ್ 7 1 5 0 1 3 -0.511
ರಾಕ್ ಸ್ಟಾರ್ಸ್ 6 0 6 0 0 0 -3.716

 

ಆರೇಂಜ್ ಕ್ಯಾಪ್ : ಮಯಾಂಕ್ ಅಗರ್ ವಾಲ್. ಪರ್ಫಲ್ ಕ್ಯಾಪ್ : ಜೆ.ಸುಚೀತ್.

 

Leave a Reply

comments

Related Articles

error: