ಮೈಸೂರು

ರಾತ್ರಿ ವೇಳೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಮನೆಗಳ್ಳರ ಬಂಧನ, 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳ ವಶ

ಮೈಸೂರು,ಡಿ.26:- 04/11/2020 ರಂದು ರೇಖಾ ಅವರ ವೀರನಗೆರೆ ಮನೆಯಲ್ಲಿ
ಕಳ್ಳತನವಾಗಿದ್ದು, ಈ ಸಂಬಂಧ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
26/12/2020 ರಂದು ಲಷ್ಕರ್ ಠಾಣೆಯ ಸಿಬ್ಬಂದಿಯವರು ಅಶೋಕ ರಸ್ತೆಯಲ್ಲಿ ಗಸ್ತು
ಮಾಡುತ್ತಿದ್ದಾಗ ಕೇರಳ ಮಸೀದಿ ಹತ್ತಿರ ಚಿನ್ನಾಭರಣವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ನಂದನ್‍ಕುಮಾರ್ ಎನ್. @ ಜಾನಿ ಬಿನ್ ನಂಜುಂಡನಾಯಕ(22) ವೀರನಗೆರೆ, ಲಷ್ಕರ್ ಮೊಹಲ್ಲಾ, ಕಾರ್ತೀಕ್.ಆರ್ ಬಿನ್ ಲೇಟ್ ರಮೇಶ್, (27), ಲೂರ್ದ್‍ ನಗರ, ಮೈಸೂರು ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿ ಇವರು 03/11/2020 ರಂದು ರಾತ್ರಿ ವೇಳೆಯಲ್ಲಿ ಮನೆಯ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ, ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದು, ಆರೋಪಿಗಳಿಂದ 40 ಗ್ರಾಂ ತೂಕದ ಚಿನ್ನಾಭರಣ ಮತ್ತು 220 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ವಶಪಡಿಸಿಕೊಳ್ಳಲಾಗಿದೆ ಇದರ ಅಂದಾಜು ಮೌಲ್ಯ 2,13,000ರೂ. ಗಳಾಗಿರುತ್ತದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ಗೀತಪ್ರಸನ್ನ ಹಾಗೂ
ದೇವರಾಜ ವಿಭಾಗದ ಎ.ಸಿ.ಪಿ. ಶಶಿಧರ್ ಅವರುಗಳ ಮಾರ್ಗದರ್ಶನದಲ್ಲಿ, ಲಷ್ಕರ್ ಪೊಲೀಸ್
ಠಾಣೆಯ ಪಿ.ಐ. ಸುರೇಶ್ ಕುಮಾರ್ ಎಸ್.ಡಿ, ಪಿ.ಎಸ್.ಐ ಧನಲಕ್ಷ್ಮಿ, ಗೌತಮ್ ಗೌಡ
ಸಿಬ್ಬಂದಿಗಳಾದ ಲೋಕೇಶ್ ಕೆ.ಎನ್, ಮಂಜುನಾಥ, ಪ್ರತೀಪ್ ಎ, ಮಂಜುನಾಥ್, ಚಿನ್ನಪ್ಪ ಮಾ ಕಲ್ಲೋಳಿ ರವರು ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: