ಮೈಸೂರು

ಹೆಬ್ಬಾಳು ಕೆರೆ ಸಾರ್ವಜನಿಕ ವೀಕ್ಷಣೆಗೆ ಮುಕ್ತ

ಮೈಸೂರು,ಡಿ,28:- ಸಾಂಸ್ಕೃತಿಕ ನಗರಿ ಮೈಸೂರಿನ ಹೆಬ್ಬಾಳಿನಲ್ಲಿ ಅತ್ಯಾಕರ್ಷಕವಾಗಿರುವ ಹೆಬ್ಬಾಳ್ ಕೆರೆಯನ್ನು ಈಗ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ವಾಕಿಂಗ್ ಪಾತ್, ರಸ್ತೆ, ಪಾರ್ಕ್ ಸೇರಿದಂತೆ ಹಲವು ಸೌಕರ್ಯ ಕಲ್ಪಿಸಿರುವ ಹೆಬ್ಬಾಳ್ ಕರೆಯನ್ನು ಇದೀಗ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.
ಸುಮಾರು 48 ಎಕರೆ ಪ್ರದೇಶದಲ್ಲಿರುವ ಹೆಬ್ಬಾಳ್ ಕೆರೆಯನ್ನು ಸಿ.ಎಸ್.ಆರ್ ನಿಧಿಯ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದ ವೇಳೆ ಇದರ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿತ್ತು.
ಇನ್ಫೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು, ಹೆಬ್ಬಾಳ್ ಕೆರೆ ಅಭಿವೃದ್ಧಿಗೆ ಶ್ರಮಿಸಿದ್ದರ ಫಲವಾಗಿ ಇದೀಗ ಕೆರೆ ಸುಂದರವಾಗಿ ರೂಪುಗೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: