ಕರ್ನಾಟಕಪ್ರಮುಖ ಸುದ್ದಿ

ಆನ್ ಲೈನ್ ಆಪ್ ಮೂಲಕ ಸಾಲ ನೀಡಿ ಕಿರುಕುಳ : ಮೂವರ ಬಂಧನ

ರಾಜ್ಯ(ಬೆಂಗಳೂರು)ಡಿ.28:- ಆನ್ ಲೈನ್ ಆ್ಯಪ್ ಗಳ ಮೂಲಕ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತ ಮಾನಸಿಕ ಹಿಂಸೆ ನೀಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸೈಯದ್ ಅಹ್ಮದ್, ಸೈಯದ್ ಇರ್ಫಾನ್ ಮತ್ತು ಆದಿತ್ಯ ಎಂದು ಗುರುತಿಸಲಾಗಿದೆ. ಆರೋಪಿಗಳು ಚೀನಿ ಕಂಪನಿಗಳ ಮೂಲಕ ಬಡ್ಡಿ ನೀಡುತ್ತ ಸಾಲ ನೀಡುತ್ತಿದ್ದರು. ಹಣ ನೀಡುವಾಗಲೇ ಶೇ.36ರಷ್ಟು ಬಡ್ಡಿಗೆಂದು ಹಣವನ್ನು ಕಡಿತಗೊಳಿಸಿ ಸಾಲ ನೀಡುತ್ತಿದ್ದರು.
ಸಾಲ ವಸೂಲಿ ಮಾಡಿದ ನಂತರ, ಹೆಚ್ಚಿನ ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದರು. ಸಾಲ ಪಡೆದ ಜನರ ಸಂಬಂಧಿಕರಿಗೆ, ಸ್ನೇಹಿತರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯುತ್ತ ಮಾನಸಿಕ ಹಿಂಸೆ ನೀಡುತ್ತಿದ್ದರು.
ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಂಪನಿಯ ಮಾಲೀಕರು ಚೈನಾ ಮೂಲದವರಾಗಿದ್ದು, ಇವರನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: