ಮೈಸೂರು

ಸೆಪ್ಟೆಂಬರ್ 24: ಮೋಜು ಸಂತೆ

ಕೃಷ್ಣಮೂರ್ತಿಪುರಂನ ವನಿತಾ ಸದನದಲ್ಲಿ ಮೈಸೂರಿಗರಿಗೆ ಸೆಪ್ಟೆಂಬರ್ 24ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಮೋಜು ಸಂತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಹಾಗೂ ಮಾರಾಟ ಮಾಡಲು ಇಚ್ಛಿಸುವ ಉದ್ಯಮಿಗಳು  ಮಳಿಗೆಗಳ ಕಾದಿರಿಸುವಿಕೆಗೆ ಸೆಪ್ಟೆಂಬರ್ 10ರೊಳಗೆ ತಮ್ಮ ಹೆಸರು ಹಾಗೂ ಉತ್ಪನ್ನಗಳನ್ನು ವನಿತಾ ಸದನ, ಕೃಷ್ಣಮೂರ್ತಿಪುರಂ, 7ನೇ ಕ್ರಾಸ್ ಮೈಸೂರು ಇಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ಮಹಿಳೆಯರಿಗಾಗಿ ರಂಗೋಲಿ, ಬೆಂಕಿಯಿಲ್ಲದ ಅಡುಗೆ ತಯಾರಿಸುವುದು, ಹೂ ಜೋಡಣೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ. 0821-2332124, ಪದ್ಮ ಆನಂದ ಮೊ.ಸಂ. 9845915228, ವಿನುತ 9035616045, ಗೀತಾ ಸೂರ್ಯನಾರಾಯಣ್ 9535633321ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: