ದೇಶಪ್ರಮುಖ ಸುದ್ದಿಮನರಂಜನೆ

ಸಂಗೀತಗಾರ ಎ.ಆರ್. ರಹಮಾನ್ ಗೆ ಮಾತೃ ವಿಯೋಗ

ದೇಶ( ಚೆನ್ನೈ)ಡಿ.28:- ಸಂಗೀತಗಾರ ಎ.ಆರ್. ರಹಮಾನ್ ಅವರ ತಾಯಿ ಕರಿಮಾ ಬೇಗಂ ಇಂದು ಚೆನ್ನೈನಲ್ಲಿ ನಿಧನರಾದರು.
ಅವರ ನಿಧನದ ನಂತರ ತಾಯಿಯ ಚಿತ್ರವನ್ನು ರಹಮಾನ್ ಟ್ವೀಟ್ ಮಾಡಿದ್ದಾರೆ. ಆಸ್ಕರ್ ಮತ್ತು ಗ್ರ್ಯಾಮಿ ವಿಜೇತ ಎ.ಆರ್.ರಹಮಾನ್ 9 ವರ್ಷದವರಿದ್ದಾಗಲೇ ಅವರ ತಂದೆ ತೀರಿಕೊಂಡಿದ್ದರು.ಇದರ ನಂತರ ತಾಯಿ ಎ.ಆರ್.ರಹಮಾನ್ ಅವರನ್ನು ಬೆಳೆಸಿದರು.

ರೆಹಮಾನ್ ತಾಯಿಯ ನಿಧನಕ್ಕೆ ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. “ಅನಾರೋಗ್ಯದಿಂದಾಗಿ ಮಹಾನ್ ಸಂಗೀತಗಾರ ಎ.ಆರ್.ರಹಮಾನ್ ಅವರ ತಾಯಿ ಕರಿಮಾ ಬೇಗಂ ಅವರ ಸಾವಿನ ಬಗ್ಗೆ ಬೇಸರವಾಗಿದೆ” ಎಂದು ಪಳನಿಸ್ವಾಮಿ ಟ್ವೀಟ್ ಮಾಡಿದ್ದಾರೆ.
ರೆಹಮಾನ್ ಮತ್ತು ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ರೆಹಮಾನ್ ಈ ಮಟ್ಟವನ್ನು ತಲುಪುವಲ್ಲಿ ಅವರ ತಾಯಿಯ “ಪಾತ್ರ ದೊಡ್ಡದು” ಇದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರು ಬೇಗಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: