
ಮೈಸೂರು
ಇಂದು ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ
ಮೈಸೂರು. ಡಿ.29:- ಬೆಳಗೊಳ ಯಂತ್ರಗಾರದ 3.50 ಎಂ.ಜಿ.ಡಿ. ಹಾಗೂ 8.00 ಎಂ.ಜಿ.ಡಿ. ಯಂತ್ರಗಾರದಲ್ಲಿ ವಿದ್ಯುತ್ ವಿತರಣಾಕೇಂದ್ರದಲ್ಲಿ ವ್ಯತ್ಯಯವಾಗುವುದರಿಂದ ಡಿಸೆಂಬರ್ 29 ಮತ್ತು 30 ರಂದು ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಮಂಡಿಮೊಹಲ್ಲಾ, ಲಷ್ಕರ್ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ ಎ.ಬಿ.ಸಿ. ಲೇಔಟ್, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರನಗರ, ತಿಲಕ್ನಗರ, ಬಡೇಮಕಾನ್, ಹಲೀಂನಗರ, ದೇವರಾಜ ಮೊಹಲ್ಲಾ ಭಾಗಶಃ ನಜರ್ಬಾದ್ ಮೊಹಲ್ಲಾ, ವಿದ್ಯಾರಣ್ಯ ಪುರಂ, ಚಾಮುಂಡಿಪುರಂ, ವಿಶ್ವೇಶ್ವರನಗರ, ದೇವರಾಜ ಮೊಹಲ್ಲಾ, ಲೂರ್ದ್ನಗರ, ಮೀನಬಜಾರ್, ವಾರ್ಡ್ ಸಂಖ್ಯೆ: 8, 17, 18, 19, 23 ರಿಂದ 27ರವರೆಗೆ 40,41, 55,60, 61, 62 ಮತ್ತು ಮೇಟಗಳ್ಳಿ ಮತ್ತು ಹೆಚ್ಚಾಳು ಕೈಗಾರಿಕಾ ಪ್ರದೇಶಗಳು ಹಾಗೂ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜಿನ ವ್ಯತ್ಯಯವಾಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)