ಮೈಸೂರು

ಕಸಾಪ ವತಿಯಿಂದ ಕುವೆಂಪು ಜಯಂತಿ ಆಚರಣೆ

ಮೈಸೂರು,ಡಿ.29:- ಇಂದು ನಗರದ ಗನ್ ಹೌಸ್ ಬಳಿ ಇರುವ ಕುವೆಂಪು ಉದ್ಯಾನವನದಲ್ಲಿ ಕುವೆಂಪುರವರ ಜನ್ಮ ದಿನಾಚರಣೆ ಅಂಗವಾಗಿ ಕಾರ್ಯಕ್ರಮವನ್ನು ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಮೈಸೂರು ನಗರ ಪಾಲಿಕೆ ಆಯೋಜಿಸಿದ್ದು ವಿಶ್ವ ಮಾನವ ಜ್ಞಾನ ಪೀಠ ಪುರಸ್ಕೃತ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಕೆ.ಸೋಮಶಖರ್, ಕ.ಸಾ.ಪ.ಅಧ್ಯಕ್ಷ ರಾದ ಡಾ.ವೈ.ಡಿ.ರಾಜಣ್ಣ, ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷರಾದ ಜಾಕೀರ್ ಹುಸೇನ್,ಆ.ಪ್ರ.ಪ್ರ.ಸ.ರಾಜ್ಯ ಸಂಚಾಲಕರಾದ ಡೈರಿ ವೆಂಕಟೇಶ್,ಸುನಿಲ್ ಇನ್ನಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: