ಕ್ರೀಡೆಪ್ರಮುಖ ಸುದ್ದಿ

ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ: ಟೀಂ ಇಂಡಿಯಾಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

ಮೇಲ್ಬರ್ನ್,ಡಿ.29-ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿದೆ.

ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವಾದ ಇಂದು ಭಾರತ ಗೆಲುವು ಸಾಧಿಸಿದೆ.

ಅಂತಿಮ ಇನ್ನಿಂಗ್ಸ್ ನಲ್ಲಿ 70 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತಕ್ಕೆ ಆರಂಭದಲ್ಲೇ ಮಯಾಂಕ್ ಅಗರ್ ವಾಲ್ (5) ಮತ್ತು ಚೇತೇಶ್ವರ ಪೂಜಾರ (3) ರನ್ ಗಳಿಗೆ ಓಟ್ ಆಗುವ ಮೂಲಕ ಆರಂಭಿಕ ಆಘಾತ ಎದುರಾಗಿತ್ತು. ಆದರೆ, ಯುವ ಬ್ಯಾಟ್ಸ್ ಮನ್ ಶುಭ್ಮನ್ ಗಿಲ್ 35 ಮತ್ತು ನಾಯಕ ಅಜಿಂಕ್ಯ ರಹಾನೆ 27 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. 15.5 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಭಾರತ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವನ್ನು 200 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿತ್ತು. ಆರನೇ ಕ್ರಮಾಂಕದಲ್ಲಿ ಆಡಿದ ಕ್ಯಾಮರೂನ್ ಗ್ರೀನ್ 45 ರನ್ ಗಳಿಸಿ ಆಸ್ಟ್ರೇಲಿಯಾ ಪರ ಹೆಚ್ಚಿನ ರನ್ ಪಡೆದರೆ, ಮ್ಯಾಥ್ಯೂ ವಾಡೆ 40ರನ್ ಗಳಿಸಿದರು. ಗ್ರೀನ್ ಮತ್ತು ಪ್ಯಾಟ್ ಪ್ಯಾಟ್ ಕಮ್ಮಿನ್ಸ್ ಏಳನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಗಳಿಸಿದರು. ಹೊಸ ಬಾಲ್ ತೆಗೆದುಕೊಂಡ ನಂತರ ಈ ಜೋಡಿ ಬೇರ್ಪಟ್ಟಿತು.

ಭಾರತದ ಪರ ವೇಗಿ ಮೊಹಮ್ಮದ್ ಸಿರಾಜ್ 3, ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ, ಆರ್.ಅಶ್ವಿನ್ ತಲಾ ಮೂರು ವಿಕೆಟ್ ಕಬಳಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟೀಂ ಇಂಡಿಯಾದ ಗೆಲುವಿನ ಬಿಸಿಸಿಐ ಹಾಗೂ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಬಿಸಿಸಿಐ, ಎಂತಹ ಗೆಲುವು! ಟೀಂ ಇಂಡಿಯಾ ಮತ್ತೆ ಪುಟಿದೇಳುವ ಮೂಲಕ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಸೋಲಿಸಿ 4 ಪಂದ್ಯಗಳ ಸರಣಿಯನ್ನು ಸಮಬಲಗೊಳಿಸಿಕೊಂಡಿದೆ ಎಂದು ಟ್ವೀಟ್ ಮಾಡಿದೆ.

ಸಚಿನ್ ತೆಂಡೂಲ್ಕರ್ ಅವರು, ವಿರಾಟ್, ರೋಹಿತ್, ಇಶಾಂತ್ ಮತ್ತು ಶಮಿ ಇಲ್ಲದೆ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಒಂದು ಅದ್ಭುತ ಸಾಧನೆ. ಒಂದನೇ ಟೆಸ್ಟ್‌ನಲ್ಲಿನ ನಷ್ಟವನ್ನು ಹಿಮ್ಮೆಟ್ಟಿಸಲು ಮತ್ತು ಸರಣಿಯನ್ನು ನೆಲಸಮಗೊಳಿಸಲು ತಂಡವು ತೋರಿಸಿದ ಸ್ಥಿತಿಸ್ಥಾಪಕತ್ವ ಮತ್ತು ಪಾತ್ರ ಮೆಚ್ಚುವಂತಹದು. ಅದ್ಭುತ ಗೆಲುವು. ವೆಲ್ ಡನ್ ಟೀಂ ಇಂಡಿಯಾ! ಎಂದು ಟ್ವೀಟ್ ಮಾಡಿದ್ದಾರೆ.

ನಾಯಕ ವಿರಾಟ್ ಕೊಹ್ಲಿ, ಇದು ಎಂತಹ ಗೆಲುವು!  ಇಡೀ ತಂಡದ ಅದ್ಭುತ ಪ್ರಯತ್ನ. ತಂಡವನ್ನು ಅದ್ಭುತವಾಗಿ ಗೆಲುವಿನತ್ತ ಕೊಂಡೊಯ್ದ ಹುಡುಗರಿಗೆ ಮತ್ತು ವಿಶೇಷವಾಗಿ ಜಿಂಕ್ಸ್‌ಗೆ ಸಂತೋಷವಾಗಿರಲು ಸಾಧ್ಯವಿಲ್ಲ. ಇಲ್ಲಿಂದ ಮುಂದೆ ಮತ್ತು ಮೇಲಕ್ಕೆ ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: