ಕರ್ನಾಟಕಪ್ರಮುಖ ಸುದ್ದಿ

ಸೋಲಿಗೆ ಕಾರಣವೇನೆಂದು ಕ್ಷೇತ್ರದ ಕಾರ್ಯಕರ್ತರೊಂದಿಗೆ ಚರ್ಚಿಸುವೆ : ಬಿಎಸ್‍ವೈ

ಬೆಂಗಳೂರು : ಅಂಬೇಡ್ಕರ್ ಚಿಂತನೆಗಳ ಮೇಲೆ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ವಿಚಾರಧಾರೆಗಳು ಉಪಚುನಾವಣೆ ನಡೆದ ಕ್ಷೇತ್ರದ ದಲಿತರಿಗೆ ಬಡವರಿಗೆ ಅರ್ಥವಾಗಲಿಲ್ಲವಾದ ಕಾರಣ ಬಿಜೆಪಿಗೆ ಸೋಲುಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ನಡೆದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ದಲಿತ ಕ್ಷೇತ್ರಗಳಲ್ಲಿ ಸಮರ್ಥವಾಗಿ ನಿಂತು ಕಾರ್ಯನಿರ್ವಹಿಸುವ ಕಾರ್ಯಕರ್ತರ ಪಡೆ ಇಲ್ಲ ಎಂದು ಉಪಚುನಾವಣೆ ಸೋಲಿನ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರ ಮೇಲೆ ಹಾಕಿದರು.

ಉಪಚುನಾವಣೆ ನಡೆದ ಕ್ಷೇತ್ರಗಳು ಮೂಲತ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳಲ್ಲ. ಇಷ್ಟಾದ್ರೂ ಆ ಕ್ಷೇತ್ರಗಳಲ್ಲಿ ಬಿಜೆಪಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಶೇಕಡಾವಾರು ಮತಗಳನ್ನು ಪಡೆದುಕೊಂಡಿದೆ. ಸೋಲಿನ ಕುರಿತು ಕ್ಷೇತ್ರಗಳಿಗೆ ತೆರಳಿ ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿ ಸಮಾಲೋಚನೆ ನಡೆಸುತ್ತೇನೆ. ಸೋಲಿಗೆ ಕಾರಣವೇನು ಎಂದು ಈ ವೇಳೆ ಚರ್ಚೆ ನಡೆಸುತ್ತೇನೆ ಎಂದರು.

(ಎಸ್‍.ಎನ್‍/ಎನ್‍.ಬಿ.ಎನ್‍)

Leave a Reply

comments

Related Articles

error: