Uncategorizedಕರ್ನಾಟಕಪ್ರಮುಖ ಸುದ್ದಿಮೈಸೂರು

ಮಹಿಷ ದಸರಾ ಆಚರಣೆಯಿಂದ ಜಾತಿವಾದ ಬಿತ್ತುವ ಬುದ್ಧಿಜೀವಿಗಳು

ಮೈಸೂರು

ನಾಡ ಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿ ವಿರೋಧಿಸಿ ಮಹಿಷಾಸುರ ದಸರಾವನ್ನು ಆಚರಿಸುವ ಮೂಲಕ ಬುದ್ಧಿಜೀವಿಗಳು ಜಾತಿ ಜಾತಿ ಮಧ್ಯೆ ವಿಷ ಬಿತ್ತಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಹಾವರಾತ ಬಾಬಾಜೀ ಆಶ್ರಮ, ಮದರ್ ಸೋನಿಯಾ ಗಾಂಧಿ ವಲ್ಡ್ ವೆಲ್ ಫೇರ್ ಕಮಿಟಿಯ ಸಂಸ್ಥಾಪಕ ಆದ್ಯಕ್ಷ ಎ.ಅಮಿತಾಬ್ ಆರೋಪಿಸಿದರು.

ಅವರು ನಗರ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ  ನಡೆಸಿ  ಸೆ.29ರಂದು ಚಾಮುಂಡಿ ಬೆಟ್ಟದಲ್ಲಿ ನಡೆದ ಮಹಿಷ ದಸರಾ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಇತಿಹಾಸವೇ ಬೇರೆ ಪೌರಾಣಿಕವೇ ಬೇರೆ. ಮಹಿಷಾಸುರ ಎನ್ನುವುದು ಪೌರಾಣಿಕ ಪಾತ್ರ. ಅವನಿಗೆ ದಲಿತ ಸಾಮ್ರಾಟ ಪದವಿಯನ್ನು ನೀಡುವ ಮೂಲಕ ಮಹಿಷ ಧರ್ಮವನ್ನು ನೂತನವಾಗಿ ಸೃಷ್ಠಿಸುವ ಮೂಲಕ ಬುದ್ಧಿಜೀವಿಗಳು ಧಾರ್ಮಿಕ ವಿರೋಧ ವ್ಯಕ್ತಪಡಿಸಿದ್ದಾರೆ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸುವ ವಿಜಯೋತ್ಸವವನ್ನಾಗಿ ದಸರಾ ಹಬ್ಬ ಆಚರಿಸಲಾಗುತ್ತಿದ್ದು ಈ ನಂಬಿಕೆಯನ್ನು ಕೆಡಿಸುವಂತಹ ಸಂಪ್ರದಾಯಕ್ಕೆ ಸರ್ಕಾರ ಅನುಮತಿ ನೀಡಿರುವುದು ಖಂಡನೀಯ. ಧಾರ್ಮಿಕ ವಿಚಾರ ಸೂಕ್ಷ್ಮವಾಗಿದ್ದು ಧರ್ಮವನ್ನು ವಿರೋಧಿಸಿದಾಗ ಕೋಮು ಸಂಘರ್ಷಕ್ಕೆ ಎಡೆಯಾಗಿ ಕಾನೂನು ಸುವ್ಯವಸ್ಥೆ ಹದಗೆಡುವುದು. ಬುದ್ಧಿ ಜೀವಿಗಳ ಆಧಾರವಿಲ್ಲದ ಚಿಂತನೆಯಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುವುದು ಆದ್ದರಿಂದ ಸರ್ಕಾರ ಮಹಿಷ ದಸರಾ ನಿಷೇಧಿಸಿಬೇಕು. ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ವಿಗ್ರಹವನ್ನು ತೆರವುಗೊಳಿಸಿ ಸ್ವತಂತ್ರ್ಯ ಹೋರಾಟಗಾರರ ಅಥವಾ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್, ಕಾವ್ಯ ಹಾಗೂ ಪ್ರೊ.ಪ್ರದೀಪ್ ಹಾಜರಿದ್ದರು.

Leave a Reply

comments

Related Articles

error: