ಮೈಸೂರು

ಕನಿಷ್ಠ ಗಾಯದ ತೆರೆದ ಹೃದಯ ಶಸ್ತ್ರಕ್ರಿಯೆಯಲ್ಲಿ ಯಶಸ್ವಿಯಾದ ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್

ಮೈಸೂರು,ಡಿ.29:- ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ತನ್ನ ರೋಗಿಗಳಿಗೆ ಯಾವಾಗಲೂ ಗುಣಮಟ್ಟದ ಸೇವೆಯನ್ನು ನೀಡಲು ಬದ್ಧತೆ ಹೊಂದಿದೆ. ಈ ನಿಟ್ಟಿನಲ್ಲಿ ಸತತವಾಗಿ ತನ್ನನ್ನು ತಾನು ಮೇಲ್ದರ್ಜೆಗೇರಿಸಿಕೊಳ್ಳುತ್ತ ಅತ್ಯುತ್ತಮವಾದುದ್ದನ್ನು ನೀಡಲು ಪ್ರಯತ್ನಿಸುತ್ತಿದೆ. ಮುಖ್ಯ ಹೃದಯ ಶಸ್ತ್ರ ಚಿಕಿತ್ಸಾ ಸಲಹಾ ತಜ್ಞರಾದ ಡಾ.ಮಧುಪ್ರಕಾಶ್ ಎಸ್ ಸಿ ಮತ್ತು ಅರಿವಳಿಕೆ ತಜ್ಞರಾದ ಡಾ.ಸಾತ್ವಿಕ್ ತೇಲ್ಕರ್ ಅವರ ಆರೈಕೆಯಡಿಯಲ್ಲಿ ಕನಿಷ್ಠ ಗಾಯದ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಕಾವೇರಿ ಗ್ರೂಪ್ ನ ಚೇರ್ಮನ್ ಡಾ.ಚಂದ್ರಶೇಖರ್ ಜಿ.ಆರ್.ತಿಳಿಸಿದರು.
ಆಸ್ಪತ್ರೆಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ 41ವರ್ಷ ವಯಸ್ಸಿನ ರೋಗಿ ಅಬ್ದುಲ್ ಲತೀಫ್ ಅವರಿಗೆ ಕನಿಷ್ಠ ಗಾಯದ ತಂತ್ರದೊಂದಿಗೆ ನಮ್ಮ ಮೊದಲ ಮೈಟ್ರಲ್ ವಾಲ್ವ್ ದುರಸ್ತಿ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದೇವೆ ಎಂದು ತಿಳಿಸಿದರು. ಕನಿಷ್ಠ ಗಾಯದ ಹೃದಯ ಶಸ್ತ್ರ ಚಿಕಿತ್ಸೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವ ವಿಭಾಗವಾಗಿದೆ. ಮೆಟ್ರೋನಗರಗಳ ಕೆಲವು ಆಸ್ಪತ್ರೆಗಳು ಈಗಾಗಲೇ ಈ ಸೇವೆ ಪೂರೈಸುತ್ತಿದೆ. ಮೈಸೂರಿನಲ್ಲಿ ಈ ಆರೈಕೆಯನ್ನು ಪೂರೈಸುವ ಮೊದಲ ಆಸ್ಪತ್ರೆಯೆಂದರೆ ಅದು ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್ ಆಗಿದೆ ಎಂದರು.
ಡಾ.ಮಧುಪ್ರಕಾಶ್ ಮಾತನಾಡಿ ಸಾಂಘಿಕವಾದ ತಂಡದ ಕಾರ್ಯದ ಮಾರ್ಗದ ಅಗತ್ಯ ಈ ಶಸ್ತ್ರಕ್ರಿಯಾ ತಂತ್ರಕ್ಕೆ ಇರುತ್ತದೆಯಲ್ಲದೆ ಈ ಮೂಲಕ ಅನೇಕರಿಗೆ ಶಸ್ತ್ರಕ್ರಿಯೆ ನಡೆಸಬಹುದಾಗಿದೆ. ಕವಾಟಗಳ ಶಸ್ತ್ರಚಿಕಿತ್ಸೆ, ಎಎಸ್ ಡಿ ಕ್ಲೋಷರ್ ಮತ್ತು ಬೈಪಾಸ್ ಶಸ್ತ್ರಕ್ರಿಯೆಗಳಂತಹ ಮುಖ್ಯ ಶಸ್ತ್ರಚಿಕಿತ್ಸಾ ಕ್ರಮಗಳನ್ನು ಈ ತಂತ್ರದ ಮೂಲಕ ನಡೆಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೌಲಭ್ಯ ನಿರ್ದೇಶಕ ಸಂದೀಪ್ ಪಟೇಲ್ ಬಿ.ಜೆ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: