ಕರ್ನಾಟಕ

ಚಾಕುವಿನಿಂದ ಇರಿದು ಹತ್ಯೆಗೆ ಯತ್ನ

ಬೆಂಗಳೂರು: ಕಾಂಪೌಂಡ್ ಕುಸಿದು ಬಿದ್ದ ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದು ಹತ್ಯೆಗೈಯಲು ಪಕ್ಕದ ಮನೆಯವರೇ ಯತ್ನಿಸಿರುವ ಘಟನೆ ಬೆಂಗಳೂರಿನ ಹೆಬ್ಬಾಳದ ವೀರಣ್ಣಪಾಳ್ಯದಲ್ಲಿ ನಡೆದಿದೆ.

ಏಪ್ರಿಲ್ 9 ರಂದು ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಶ್ರೀರಾಮ್ ಜೈನ್ ಎಂಬವರೇ ಹಲ್ಲೆಗೊಳಗಾದವರಾಗಿದ್ದು, ಇವರ ಮೇಲೆ ಪಕ್ಕದ ಮನೆಯ ಕೃಷ್ಣಪ್ಪ ಹಾಗೂ ಅವರ ಮೊಮ್ಮಗ ದೀಪು ದಾಳಿ ನಡೆಸಿದ್ದಾರೆ. ಚಾಕುವಿನಿಂದ ಹತ್ತಾರು ಬಾರಿ ಇರಿಯುವ ದೃಶ್ಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.

ಹಾಗಾದರೆ ನಡೆದಿದ್ದೇನು: ಶ್ರೀರಾಮ್ ತಮ್ಮ ಮನೆಯ ಚೇಂಬರ್ ತುಂಬಿಕೊಂಡಿದ್ದರಿಂದ ಅದನ್ನು ಕ್ಲೀನ್ ಮಾಡಿಸುತ್ತಿದ್ದರು. ಈ ವೇಳೆ ಕೃಷ್ಣಪ್ಪನ ಮನೆಯ ಕಾಂಪೌಂಡ್ ಕುಸಿದುಬಿದ್ದಿತ್ತು. ಇದೇ ವಿಚಾರವಾಗಿ ಜಗಳ ನಡೆದು ಶ್ರೀರಾಮ್ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶ್ರೀರಾಮ್ ಜೈನ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಸಂಬಂಧ ಕೆ.ಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: