ಕರ್ನಾಟಕಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ರೂಪಾಂತರ ಕೊರೋನಾ ವೈರಸ್ ಪತ್ತೆ ಹಿನ್ನೆಲೆ : ಅಪಾರ್ಟ್ ಮೆಂಟ್ ಸೀಲ್ ಡೌನ್

ರಾಜ್ಯ( ಬೆಂಗಳೂರು), ಡಿ.29:-ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರಲ್ಲಿ ರೂಪಾಂತರ ಕೊರೋನಾ ವೈರಸ್ ಪತ್ತೆಯಾಗಿರುವ ಬೆನ್ನಲ್ಲೇ ಅಪಾರ್ಟ್‌ಮೆಂಟ್ ವೊಂದನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ನಗರದ ವಸಂತಪುರದ ಅಪಾರ್ಟ್ಮೆಂಟ್ ನಲ್ಲಿ ನೆಲೆಸಿದ್ದ ತಾಯಿ-ಮಗಳು, ಇತ್ತೀಚೆಗೆ ಯುಕೆಯಿಂದ ವಾಪಸಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ರೂಪಾಂತರ ಕೊರೋನಾ ವೈರಸ್ ಪತ್ತೆಯಾಗಿದೆ

ಈ ಹಿನ್ನೆಲೆ 28 ದಿನಗಳ ಕಾಲ ಅಪಾರ್ಟ್ಮೆಂಟ್ ಸೀಲ್ ಡೌನ್ ಮಾಡಲಾಗಿದ್ದು, ಈ ವ್ಯಾಪ್ತಿಯಲ್ಲಿ ಜನರು ಓಡಾಟ ಮಾಡದಂತೆ ಹೇಳಲಾಗಿದೆ.ಅಗತ್ಯ ವಸ್ತುಗಳಿಗೆ ಬಿಬಿಎಂಪಿಯನ್ನು ಸಂಪರ್ಕಿಸಲು ಅಧಿಕಾರಿಗಳು ಸೂಚಿಸಿದ್ದಾರೆ.

ಅದೇರೀತಿ, ಯುಕೆಯಿಂದ ವಾಪಾಸ್ಸಾದ ಜೆಪಿನಗರದ ನಿವಾಸಿಯೊಬ್ಬರಲ್ಲೂ
ರೂಪಾಂತರ ಕೊರೋನಾ ವೈರಸ್ ಕಂಡು ಬಂದಿದೆ.ಒಟ್ಟಾರೆ, ಇವರ ಸಂಪರ್ಕದಲ್ಲಿದ್ದ 42 ಜನರನ್ನು ಕ್ವಾರಂಟೈನ್ ಪ್ರಕ್ರಿಯೆ ಒಳಪಡಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: