ಮೈಸೂರು

ಕೊಡವರಿಂದ ಸೌರಮಾನ ಯುಗಾದಿ ಆಚರಣೆ

ಕೊಡಗು: ಕೊಡವ ಸಮುದಾಯದ ಜನರು ತಮ್ಮ ಸಂಪ್ರದಾಯದಂತೆ ಸೌರಮಾನ ಯುಗಾದಿಯನ್ನು ಸಂಭ್ರಮದಿಂದ ಆಚರಿಸಿದರು.

ಕೊಡವ ಸಮುದಾಯದ ಜನ ಈ ಹಬ್ಬವನ್ನು ಹೊಸ ವರ್ಷವಾಗಿ ಆಚರಿಸುತ್ತಾರೆ. ಗದ್ದೆಯಲ್ಲಿ ಸಾಂಕೇತಿಕವಾಗಿ ಉಳುಮೆ ಮಾಡಿದರೆ ಮುಂದೆ ಕೃಷಿ ಚಟುವಟಿಯಕೆಯಲ್ಲಿ ತೊಡುಗಲು ಶುಭ ದಿನವನ್ನು ಮತ್ತೆ ನೋಡಬೇಕಿಲ್ಲ ಎನ್ನುವುದು ಕೊಡವ ಸಮುದಾಯದ ಜನರ ನಂಬಿಕೆ. ಎಲ್ಲರೂ `ಎಡಮ್ಯಾರ್ ಒಂದ್’ ಹಬ್ಬವನ್ನು ಆಚರಣೆ ಮಾಡಿದರು. ಕೊಡವರ ಎಲ್ಲ ಆಚರಣೆಗಳ ಮೂಲ ಕೃಷಿ. ಬೆಳಗ್ಗೆ ದೇವರನ್ನು ಪ್ರಾರ್ಥಿಸಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಹಾಗೂ ನೇಗಿಲುಗಳನ್ನು ಪೂಜಿಸಲಾಯಿತು. ಬಳಿಕ ಗದ್ದೆ ಉಳುಮೆ ಮಾಡುವ ಮೂಲಕ ವರ್ಷದ ಉಳುಮೆಗೆ ಚಾಲನೆ ನೀಡಲಾಯಿತು.ಮಡಿಕೇರಿ ತಾಲೂಕಿನ ಹೋದ್ದೂರು ಗ್ರಾಮದ ಐನ್ ಮನೆಯಲ್ಲಿ ದೇವರಿಗೆ ಅಕ್ಕಿ ಹಾಕಿ ನಮಿಸಿ, ಗದ್ದೆಯಲ್ಲಿ ಎತ್ತುಗಳನ್ನು ಪೂಜಿಸಲಾಯಿತು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: