ಕ್ರೀಡೆದೇಶಪ್ರಮುಖ ಸುದ್ದಿ

ನ್ಯೂಜಿಲೆಂಡ್‌ ನ ಮಾಜಿ ಕ್ರಿಕೆಟಿಗ ಜಾನ್‌ ಎಫ್‌.ರೀಡ್‌ ನಿಧನ

ವಿದೇಶ( ವೆಲಿಂಗ್ಟನ್)ಡಿ.30:- ದೀರ್ಘಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ನ್ಯೂಜಿಲೆಂಡ್‌ ನ ಮಾಜಿ ಕ್ರಿಕೆಟಿಗ ಜಾನ್‌ ಎಫ್‌.ರೀಡ್‌ ನಿಧನರಾದರು.
ಅವರಿಗೆ 64ವರ್ಷ ವಯಸ್ಸಾಗಿತ್ತು. ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದ ರೀಡ್‌ ತಮ್ಮ ತಂಡದ ಪರ 19 ಟೆಸ್ಟ್‌ಗಳನ್ನು ಆಡಿದ್ದು ಆರು ಶತಕಗಳನ್ನು ಬಾರಿಸಿದ್ದರು.

ಅವರ ಶತಕಗಳಲ್ಲಿ ಒಂದು ಶತಕವು (108), ಕಿವೀಸ್‌ ತಂಡಕ್ಕೆ, ಆಸ್ಟ್ರೇಲಿಯಾದ ವಿರುದ್ಧ 41 ರನ್‌ ಗಳ ಪ್ರಸಿದ್ಧ ಟೆಸ್ಟ್‌ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿತ್ತು. ಬ್ರಿಸ್ಬೇನ್‌ನ ಗ್ಯಾಬಾದಲ್ಲಿ 1985ರ ನವೆಂಬರ್‌ನಲ್ಲಿ ನಡೆದ ಆ ಟೆಸ್ಟ್‌ ಪಂದ್ಯದಲ್ಲಿ ರೀಡ್‌, ಮತ್ತೊಬ್ಬ ಮಧ್ಯಮ ಕ್ರಮಾಂಕದ ಆಟಗಾರ ಮಾರ್ಟಿನ್‌ ಕ್ರೋವ್‌ (188) ಜೊತೆ ಮೂರನೇ ವಿಕೆಟ್‌ಗೆ ಆಗಿನ ಕಾಲದ ದಾಖಲೆಯಾದ 225 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದರು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: