ಮೈಸೂರು

24/7 ಶ್ರದ್ಧಾಂಜಲಿ ವಾಹನ ಕೆ.ಆರ್.ಆಸ್ಪತ್ರೆಗೆ ಹಸ್ತಾಂತರ

ವಾರದ ಏಳೂ ದಿನಗಳಲ್ಲಿ 24ಗಂಟೆಗಳು ಸೇವೆ ಸಲ್ಲಿಸುವ ಶ್ರದ್ಧಾಂಜಲಿ ವಾಹನವನ್ನು ಶುಕ್ರವಾರ ಕೆ.ಆರ್.ಆಸ್ಪತ್ರೆಯ ಆಡಳಿತ ವಿಭಾಗಕ್ಕೆ ಶುಕ್ರವಾರ ಹಸ್ತಾಂತರಿಸಲಾಯಿತು.

ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶ್ರದ್ಧಾಂಜಲಿ ವಾಹನದ ಕೀಲಿಕೈಯನ್ನು ಕಚೇರಿಯ ವ್ಯವಸ್ಥಾಪಕ ಡಾ.ಕೃಷ್ಣಮೂರ್ತಿ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಅವರು ಖಾಸಗೀ ವಾಹನಗಳಲ್ಲಿ ಶವ ಸಾಗಿಸಲು ಬಹುತೇಕರು ಸಮರ್ಥರಾಗಿರುವುದಿಲ್ಲ. ಅಂತಹ ಸಮಯದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆ ಶವ ಸಾಗಿಸಲು ತೊಂದರೆ ಪಡಬೇಕಾಗುತ್ತದೆ. ಅದರಿಂದ ಮುಖ್ಯಮಂತ್ರಿಯವರ ನಿರ್ದೇಶನದಂತೆ ಪ್ರತಿ ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ  ಶ್ರದ್ಧಾಂಜಲಿ ವಾಹನ ನೀಡಲಾಗುತ್ತಿದೆ. ಶ್ರದ್ಧಾಂಜಲಿ ವಾಹನವು 108 ಅ್ಯಂಬುಲೆನ್ಸ್ ರೀತಿಯಲ್ಲಿಯೇ ಕಾರ್ಯನಿರ್ವಹಿಸಲಿದೆ ಎಂದರು.

ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಮತ್ತು ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: