
ಮೈಸೂರು
ಮನೆಗಳ ನಿರ್ಮಾಣದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಸಂಸದರು-ಶಾಸಕರು
ಮೈಸೂರು,ಡಿ.30:-ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಮನೆಗಳ ನಿರ್ಮಾಣದ ಕಾಮಗಾರಿಗಳಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ಹಾಗೂ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಅವರು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ-21 ರ ಸದಸ್ಯರಾದ ವೇದಾವತಿ, ವಾರ್ಡ್ ಸಂ-18 ರ ರವೀಂದ್ರ, ವಾರ್ಡ್ ಸಂ-25 ರ ರಂಗಸ್ವಾಮಿ ರವರ ಸಮ್ಮುಖದಲ್ಲಿ ಭೂಮಿಪೂಜೆ ನೆರವೇರಿಸಿದರು.
ಗಂಗೋತ್ರಿ ಬಡಾವಣೆಯ ಕುದುರೆಮಾಳದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಪ್ರಧಾನ ಮಂತ್ರಿ ಆವಾಜ್ ಯೋಜನೆ ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆಗಳ ನಿರ್ಮಾಣಕ್ಕಾಗಿ ಚಾಮರಾಜ ವಿಧಾನ ಸಭಾ ಕ್ಷೇತ್ರಕ್ಕೆ ಮಂಜೂರಾದ 655 ಮನೆಗಳಲ್ಲಿ ಕುದುರೆ ಮಾಳದಲ್ಲಿ-60, ಮಂಜುನಾಥಪುರದಲ್ಲಿ-102 ಮನೆಗಳಿಗೆ ಮಂಜುನಾಥಪುರ 2 ನೇ ಕ್ರಾಸ್, ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ, ಕೈಲಾಸಪುರಂನಲ್ಲಿ ಕೈಲಾಸಪುರಂ, 1 ನೇ ಕ್ರಾಸ್, [ಮೊಟ್ಟೆಕೇರಿ] ಹರಳಿಕಟ್ಟೆಯ ಪೆಟ್ಟಿ ಒಡೆಯುವ ಜಾಗದ ಹತ್ತಿರ 66 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. (ಕೆ.ಎಸ್,ಎಸ್.ಎಚ್)