ಪ್ರಮುಖ ಸುದ್ದಿವಿದೇಶ

ದೂರದರ್ಶನ ನೇರಪ್ರಸಾರದಲ್ಲಿ ಲಸಿಕೆ ಹಾಕಿಸಿಕೊಂಡ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ವಾಷಿಂಗ್ಟನ್,ಡಿ.30- ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರತ ಮೂಲದ ಅಮೆರಿಕ ನಿವಾಸಿ ಕಮಲಾ ಹ್ಯಾರಿಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಆ ಮೂಲಕ ಆಫ್ರಿಕನ್-ಅಮೆರಿಕನ್ ಜನರಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಂಬಿಕೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ವಾಂಷಿಗ್ಟಂನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ದೂರದರ್ಶನದ ನೇರಪ್ರಸಾರದಲ್ಲಿ ಕಮಲಾ ಹ್ಯಾರಿಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಕಮಲಾ ಹ್ಯಾರಿಸ್ ತಮ್ಮ ಮೊದಲ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.

ಅಮೆರಿಕದ ಸಂಸ್ಥೆ ಮಾಡರ್ನಾ ತಯಾರಿಸಿದ ಲಸಿಕೆ ಸ್ವೀಕರಿಸಿದ ಬಳಿಕ ಮಾತನಾಡಿದ ಕಮಲಾ ಹ್ಯಾರಿಸ್, ನಿಮ್ಮ ಸಮುದಾಯದಲ್ಲಿಯೇ ನೀವು ಲಸಿಕೆ ತೆಗೆದುಕೊಳ್ಳಬಹುದು ಎಂದು ಜನರಿಗೆ ನೆನಪಿಸಲು ನಾನು ಬಯಸುತ್ತೇನೆ, ಅಲ್ಲಿ ನಿಮಗೆ ತಿಳಿದಿರುವ ಜನರಿಂದಲೇ ನೀವು ಲಸಿಕೆಯನ್ನು ಸ್ವೀಕರಿಸುತ್ತೀರಿ. ಈ ಮೂಲಕ ಇಲ್ಲಿನ ಜನರಿಗೆ ಅವರು ವಿಶ್ವಾಸಾರ್ಹ ಸಹಾಯ ಮೂಲಗಳನ್ನು ಹೊಂದಿದ್ದಾರೆಂದು ನೆನಪಿಸಲು ನಾನು ಬಯಸುತ್ತೇನೆ ಎಂದಿದ್ದಾರೆ.

ದೇಶದಾದ್ಯಂತ ಆಫ್ರಿಕನ್-ಅಮೇರಿಕನ್ ಸಮುದಾಯವು ಕೋವಿಡ್ -19 ಮಹಾಮಾರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ಮತ್ತು ಅನಾರೋಗ್ಯವನ್ನು ಕಂಡಿದೆ. ಇದು ಆದಷ್ಟು ಬೇಗ ಲಸಿಕೆ ನಿರೀಕ್ಷೆಯಲ್ಲಿದ್ದ ಸಮುದಾಯ ಎಂದು ಸಮೀಕ್ಷೆ ಸಹ ಹೇಳಿತ್ತು.

ಜನವರಿ 20ರಂದು ಅಧಿಕಾರ ಸ್ವೀಕರಿಸುವ ಮೂಲಕ ಕಮಲಾ ಹ್ಯಾರಿಸ್, ಅಮೆರಿಕದ ಮೊದಲ ಇಂಡೋ-ಅಮೆರಿಕನ್ ಉಪಾಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಜೊತೆಗೆ, ಮೊದಲ ಮಹಿಳಾ ಉಪಾಧ್ಯಕ್ಷೆಯೂ ಹೌದು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: