ಕರ್ನಾಟಕಪ್ರಮುಖ ಸುದ್ದಿಮೈಸೂರು

ಅಬಕಾರಿ ರಕ್ಷಕರಿನ್ನು ಕಾನ್ಸಟೇಬಲ್ ಗಳು : ಅಬಕಾರಿ ಸಚಿವಾಲಯದ ಮಹತ್ವದ ಆದೇಶ

ಮೈಸೂರು/ಬೆಂಗಳೂರು,ಡಿ.30:- ಪೊಲೀಸ್ ಇಲಾಖೆ ಮಾದರಿಯಲ್ಲಿ ಅಬಕಾರಿ ಇಲಾಖೆಯಲ್ಲೂ ಸಹ ವಿಶಿಷ್ಟ ರೂಪದಲ್ಲಿ ಆಡಳಿತಾತ್ಮಕ ಮಾರ್ಪಾಡನ್ನು ಜಾರಿಗೊಳಿಸಿ ಅಬಕಾರಿ ಸಚಿವ ಎಚ್.ನಾಗೇಶ್ ಅವರ ನೇತೃತ್ವದಲ್ಲಿ ಅಬಕಾರಿ ಸಚಿವಾಲಯವು ಆದೇಶ ಹೊರಡಿಸಿದೆ.
ಅಬಕಾರಿ ಇಲಾಖೆ ಒಳಗೆ ಅಬಕಾರಿ ರಕ್ಷಕರು ಹಾಗೂ ಅಬಕಾರಿ ಹಿರಿಯ ರಕ್ಷಕರ ಹುದ್ದೆಗಳನ್ನು ಪದನಾಮೀಕರಿಸುವ ಮೂಲಕ ಅವರಿಗೆ ಕ್ರಮವಾಗಿ ಅಬಕಾರಿ ಕಾನ್ಸ್ಟೆಬಲ್ ಹಾಗೂ ಅಬಕಾರಿ ಮುಖ್ಯ ಕಾನ್ಸ್ಟೆಬಲ್ ಎಂಬುದಾಗಿ ಪದನಾಮಕರಣ ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ(ಅಬಕಾರಿ) ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುಳಾ ನಟರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಡಳಿತಾತ್ಮಕವಾಗಿ ಇದೊಂದು ಮಹತ್ವದ ನಿರ್ಧಾರವಾಗಿದ್ದು ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳ ಪಾಲಿಗೆ ಅತ್ಯಂತ ವಿಶೇಷವಾದ ಸಂಗತಿಯಾಗಿದೆ. ಈ ಒಂದು ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಅಬಕಾರಿ ಸಚಿವ ಎಚ್.ನಾಗೇಶ್ ಅವರು ಅಬಕಾರಿ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದ್ದಾರೆ.
ಈಗಾಗಲೇ ವೇತನ ಶ್ರೇಣಿ ಬದಲಾವಣೆ ಹಾಗೂ ವೃಂದ ಮತ್ತು ನೇಮಕಾತಿ ಸಂಬಂಧ ಮತ್ತೊಂದು ಮೈಲುಗಲ್ಲು ಸಾಧಿಸಲು ಹೊರಟಿರುವ ಸಚಿವರ ಈ ನಡೆಯನ್ನು ಮೆಚ್ಚಿ ಅಬಕಾರಿ ಇಲಾಖೆ ಸಿಬ್ಬಂದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು ಅಬಕಾರಿ ಇಲಾಖಾ ಸಿಬ್ಬಂದಿಗಳ ಪರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮೈಸೂರು ಜಿಲ್ಲಾ ಘಟಕ ನಿರ್ದೇಶಕ, ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ.ಪಿ ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: