ಕರ್ನಾಟಕಪ್ರಮುಖ ಸುದ್ದಿ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಪುಣ್ಯಸ್ಮರಣೆ: ಸಿಎಂ ಬಿಎಸ್ವೈ ಸೇರಿದಂತೆ ಗಣ್ಯರಿಂದ ವಿಷ್ಣು ಸ್ಮರಣೆ

ಬೆಂಗಳೂರು,ಡಿ.30-ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕರು ವಿಷ್ಣು ದಾದಾರನ್ನು ಸ್ಮರಿಸಿದ್ದಾರೆ.

ಬಿಎಸ್ವೈ ಅವರು, ಇಂದು ಕನ್ನಡ ಚಿತ್ರರಂಗದ ಮೇರು ನಟ, ಅಭಿಮಾನಿಗಳ ಪಾಲಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ದಿನ. ತಮ್ಮ ನೂರಾರು ಉತ್ತಮ ಚಿತ್ರಗಳ ಮೂಲಕ ಕನ್ನಡಿಗರ ನೆಚ್ಚಿನ ನಟನಾಗಿಯೇ ಉಳಿದಿರುವ ಡಾ.ವಿಷ್ಣುವರ್ಧನ್ ಕನ್ನಡ ನಾಡು ನುಡಿಗಳ ಸಾಂಸ್ಕೃತಿಕ ಏಕತೆಯ ರಾಯಭಾರಿಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು ಕನ್ನಡ ಚಿತ್ರರಂಗದ ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸೋಣ. ಬಹುಭಾಷಾ ತಾರೆಯಾಗಿ ಮಿಂಚಿರುವ ಅವರ ಕಲಾ ಸಿರಿವಂತಿಕೆ ಹಾಗೂ ಶ್ರೇಷ್ಠ ವ್ಯಕ್ತಿತ್ವದ ಪ್ರಭಾವ ಎಂದೆಂದಿಗೂ ಜೀವಂತ ಎಂದಿದ್ದಾರೆ.

ಸಚಿವ ಡಾ.ಕೆ.ಸುಧಾಕರ್ ಅವರು, ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯಂದು  ಆ ಮೇರು ನಟನಿಗೆ ಭಾವಪೂರ್ಣ ನಮನಗಳು. ತಮ್ಮ ಹೃದಯವಂತಿಕೆ ಮತ್ತು ಕಲಾಸೇವೆಯಿಂದ ಡಾ.ವಿಷ್ಣುವರ್ಧನ್ ರವರು ಕರುನಾಡ ಜನಮಾನಸದಲ್ಲಿ ಯಜಮಾನನಾಗಿ ಅಜರಾಮರರಾಗಿದ್ದರೆ ಎಂದು ಟ್ವೀಟ್ ಮಾಡಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪ ಅವರು, ‘ಕನ್ನಡ ಚಲನಚಿತ್ರ ರಂಗದ ಸ್ಪ್ರುರದೃಪೀ ನಟ, ಸಾಹಸ ಸಿಂಹನಾಗೀ ಮಿಂಚಿದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯತಿಥಿಯ ದಿನವಾದ ಇಂದು ಈ ಮೇರುನಟನನ್ನು ಗೌರವಪೂರ್ವಕವಾಗಿ ಸ್ಮರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರಾದ ಅಭಿನಯ ಭಾರ್ಗವ, ಅಭಿಮಾನಿಗಳ ನೆಚ್ಚಿನ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ಈ ದಿನದಂದು ಅವರಿಗೆ ಭಾವಪೂರ್ಣ ನಮನಗಳು. ತೆರೆಯ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ತಮ್ಮ ಶ್ರೇಷ್ಠ ವ್ಯಕ್ತಿತ್ವದಿಂದ ಈಗಲೂ ಡಾ. ವಿಷ್ಣುವರ್ಧನ್ ಅಸಂಖ್ಯಾತ ಅಭಿಮಾನಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಎಂದಿದ್ದಾರೆ.

ಸಚಿವ ಬಿ.ಸಿ.ಪಾಟೀಲ್, ಅಭಿನಯ ಭಾರ್ಗವ, ಕನ್ನಡ ಚಲನಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ವಿಭಿನ್ನ ನಟನೆಯ ಮೂಲಕ ತೆರೆಯ ಮೇಲೆ ಮಿಂಚಿರುವ ಅವರ ಕಲಾ ಸಿರಿವಂತಿಕೆ ಹಾಗೂ ಶ್ರೇಷ್ಠ ವ್ಯಕ್ತಿತ್ವ ನಮ್ಮೆಲ್ಲರ ಹೃದಯದಲ್ಲಿ ಎಂದೆಂದಿಗೂ ಅಮರ ಎಂದಿದ್ದಾರೆ.

ವಿಷ್ಣು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಹಾಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿ ಕುಟುಂಬಸ್ಥರು ವಿಷ್ಣುದಾದಾಗೆ ಪೂಜೆ ಸಲ್ಲಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: