ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಪಿ.ರವಿ ಕುಮಾರ್ ನೇಮಕ

ಬೆಂಗಳೂರು,ಡಿ.30-ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ (ಸಿಎಸ್) ಪಿ.ರವಿಕುಮಾರ್ ನೇಮಕಗೊಂಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹಾಲಿ ಸಿಎಸ್​ ಟಿ.ಎಂ.ವಿಜಯ್ ಭಾಸ್ಕರ್ ಅವರು ನಾಳೆ (ಗುರುವಾರ) ನಿವೃತ್ತಿ ಆಗಲಿದ್ದಾರೆ. ಹಾಗಾಗಿ ಅವರ ಸ್ಥಾನಕ್ಕೆ ರವಿಕುಮಾರ್ ಅವರನ್ನ ನೇಮಿಸಿ ಸರ್ಕಾರ ಆದೇಶಿಸಿದೆ.

ರವಿಕುಮಾರ್​ ಅವರು 1984ನೇ ಬ್ಯಾಚ್​ನ ಕರ್ನಾಟಕ ಕೇಡರ್​ನ ಐಎಎಸ್​ ಅಧಿಕಾರಿ. ವಿಜಯ್​ ಭಾಸ್ಕರ್​ ಅವರು 2018ರಲ್ಲಿ ಸಿಎಸ್​ ಆಗಿ ಅಧಿಕಾರ ವಹಿಸಿಕೊಂಡಿದ್ದರು. ರವಿಕುಮಾರ್​ ಹೆಚ್ಚುವರಿ ಸಿಎಸ್​ ಆಗಿದ್ದರು. ಇದೀಗ ಸಿಎಸ್​ ಆಗಿ ನೇಮಕಗೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: