ದೇಶಪ್ರಮುಖ ಸುದ್ದಿ

ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ಜನವರಿ 31 ರವರೆಗೆ ವಿಸ್ತರಣೆ : ರಾತ್ರಿ ಕರ್ಫ್ಯೂ ಈಗಾಗಲೇ ಜಾರಿಯಲ್ಲಿ

ದೇಶ(ಮುಂಬೈ)ಡಿ.31:- ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಹಾರಾಷ್ಟ್ರ ಸರ್ಕಾರ 2021 ಜನವರಿ 31 ರವರೆಗೆ ಲಾಕ್‌ ಡೌನ್ ನಿರ್ಬಂಧಗಳನ್ನು ವಿಸ್ತರಿಸಿದೆ.
ಹೊಸ ವರ್ಷವನ್ನು ಆಚರಿಸಲು ಜನರು ತಮ್ಮ ಮನೆಗಳಿಂದ ಹೊರಗೆ ಹೋಗದಂತೆ ಸರ್ಕಾರವು ಮನವಿ ಮಾಡಿದೆ. ಅದೇ ರೀತಿಯಲ್ಲಿ, ಹೊಸ ವರ್ಷವನ್ನು ಸಾಮಾನ್ಯ ರೀತಿಯಲ್ಲಿ ಸ್ವಾಗತಿಸಲು ಮತ್ತು ಬೀಚ್, ಉದ್ಯಾನಗಳು, ರಸ್ತೆಗಳಿಗೆ ಹೋಗುವುದನ್ನು ತಪ್ಪಿಸಲು ಮನವಿ ಮಾಡಲಾಗಿದೆ.
ಈ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೊಸ ವರ್ಷವನ್ನು ಆಚರಿಸಲು ಹತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಮನೆಯಿಂದ ಹೊರಗೆ ಹೋಗಬಾರದು ಎಂದು ಸುತ್ತೋಲೆಯಲ್ಲಿ ನಿರ್ದಿಷ್ಟವಾಗಿ ಕರೆ ನೀಡಲಾಗಿದೆ. ಮುಂಬೈಯಲ್ಲಿ, ಹೊಸ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮರೀನ್ ಡ್ರೈವ್, ಗೇಟ್‌ ವೇ ಆಫ್ ಇಂಡಿಯಾ, ಗಿರ್ಗಾಂವ್ ಮತ್ತು ಜುಹು ಮುಂತಾದ ಸ್ಥಳಗಳಿಗೆ ತೆರಳುತ್ತಾರೆ.
ಸರ್ಕಾರ ಹೊರಡಿಸಿದ ಆದೇಶದಲ್ಲಿ, ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವ ಅಪಾಯವಿದೆ ಎಂದು ಹೇಳಲಾಗಿದೆ. ಆದ್ದರಿಂದ, ಇದರ ಹರಡುವಿಕೆಯನ್ನು ತಡೆಗಟ್ಟಲು ಕೆಲವು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಲಾಕ್ಡೌನ್ ನಿರ್ಬಂಧಗಳನ್ನು ರಾಜ್ಯದಲ್ಲಿ ಜನವರಿ 31 ರವರೆಗೆ ವಿಸ್ತರಿಸಲಾಗಿದೆ.
ಕೆಲವು ತಿಂಗಳುಗಳಲ್ಲಿ, ಸರ್ಕಾರವು ಅನೇಕ ರೀತಿಯ ಲಾಕ್‌ ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿತ್ತು. ಪೂಜಾ ಸ್ಥಳಗಳನ್ನು ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ಕಳೆದ ತಿಂಗಳು ಅನುಮತಿ ನೀಡಿತ್ತು. ಇದರೊಂದಿಗೆ ರಾಜ್ಯದ ಕೆಲವು ಭಾಗಗಳಲ್ಲಿ 9 ರಿಂದ 12 ರವರೆಗೆ ತರಗತಿಗಳು ಪ್ರಾರಂಭವಾಗಿವೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: