ದೇಶಪ್ರಮುಖ ಸುದ್ದಿಮನರಂಜನೆ

ಬಾಯಿಯಲ್ಲಿ ಬ್ರಶ್ ಹಿಡಿದು ನಟ ಸೋನುಸೂದ್ ಚಿತ್ರಿಸಿದ ಬಾಲಕ: ಭಾವುಕರಾದ ಸೋನು ಸೂದ್ದೇಶ(ನವದೆಹಲಿ)ಡಿ.31:- ಬಾಲಿವುಡ್ ನಟ ಸೋನು ಸೂದ್ ಅವರ ಚಿತ್ರವನ್ನು ವಿಕಲಚೇತನ ಮಗುವೊಂದು ಬಾಯಿಯಲ್ಲಿ ಕುಂಚ ಹಿಡಿದು ಚಿತ್ರಿಸಿದೆ.
ಇದನ್ನು ನೋಡುತ್ತಲೇ ನಟ ಸೋನು ಸೂದ್ ತುಂಬಾ ಭಾವುಕರಾಗಿದ್ದಾರೆ. ಸೋನು ಸೂದ್ ಈ ಮಗು ತಮ್ಮ ಚಿತ್ರ ರಚಿಸುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದರೊಂದಿಗೆ ಸೋನು ಸೂದ್ ಶೀರ್ಷಿಕೆಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ವಿಡಿಯೋ ಹಂಚಿಕೊಳ್ಳುವಾಗ ಸೋನು ಸೂದ್ ಕೂಡ ಶೀಘ್ರದಲ್ಲೇ ಮಗುವನ್ನು ಭೇಟಿಯಾಗುವ ಕುರಿತು ಹೇಳಿಕೊಂಡಿದ್ದಾರೆ.
ಸೋನು ಸೂದ್ ಈ ಮಗು ತನ್ನ ಬಾಯಿಂದ ಪೇಂಟ್ ಬ್ರಷ್ ಬಳಸಿ ಪೇಂಟಿಂಗ್ ತಯಾರಿಸುವ ವಿಡಿಯೋ ಹಂಚಿಕೊಂಡಿದ್ದು, “ಹೃದಯವನ್ನು ಮುಟ್ಟಿದೆ. ಶೀಘ್ರದಲ್ಲೇ ಭೇಟಿಯಾಗುತ್ತೇನೆ” ಎಂದು ಬರೆದಿದ್ದಾರೆ. ಸೋನು ಸೂದ್ ಅವರ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಇದರೊಂದಿಗೆ ಸೋನು ಅವರ ಈ ಪೋಸ್ಟ್ ಕೂಡ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಕಾಮೆಂಟ್ ಬಾಕ್ಸ್ ನಲ್ಲಿ ಅಭಿಮಾನಿಗಳು ಈ ಮಗುವನ್ನು ತುಂಬಾ ಹೊಗಳುತ್ತಿದ್ದರೆ, ಸೋನು ಸೂದ್ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: