
ಕರ್ನಾಟಕಪ್ರಮುಖ ಸುದ್ದಿ
ವಾಯುಸೇನೆ ಕ್ಯಾಂಟಿನ್ ನಲ್ಲಿ ಅಕ್ರಮ ಮಾರಾಟ : ವ್ಯಕ್ತಿಯ ಬಂಧನ
ರಾಜ್ಯ( ಬೆಂಗಳೂರು)ಜ.1:- ವಾಯುಸೇನೆ ಕ್ಯಾಂಟಿನ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ವ್ಯಕ್ತಿಯೋರ್ವನನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಣಿ (60) ಎಂದು ಗುರುತಿಸಲಾಗಿದೆ. ‘ರಿಯಲ್ ಎಸ್ಟೇಟ್ ಉದ್ಯಮಿಯಾದ ಮಣಿ, ಮೇಕ್ರಿ ವೃತ್ತ ಬಳಿ ಇರುವ ವಾಯುಸೇನೆ ಕ್ಯಾಂಟಿನ್ ಗೆ ಹೋಗಿ ಮದ್ಯ ಖರೀದಿ ಮಾಡಿದ್ದರು. ಹೊಸ ವರ್ಷಾಚರಣೆಗೆ ಮಾರಾಟ ಮಾಡಲೆಂದು ಹೊರಟಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬಸವೇಶ್ವರನಗರ ಹಾಗೂ ಮಾಗಡಿ ರಸ್ತೆ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ’ ಎಂದು ಡಿಸಿಪಿ ಸಂಜೀವ್ ಪಾಟೀಲ ಹೇಳಿದ್ದಾರೆ. ‘ಬಂಧಿತರಿಂದ ಬ್ಲ್ಯಾಕ್ ಆ್ಯಂಡ್ ವೈಟ್ ಕಂಪನಿಯ 26 ಬಾಟಲ್, ಪೇಪರ್ಸ್ 55 ಬಾಟಲ್, ಪೀಟರ್ ಸ್ಕ್ವಾಚ್ 15 ಬಾಟಲ್, ಪ್ರೈಡ್ಸ್ 13 ಬಾಟಲ್ ಹಾಗೂ ಎಂ.ಸಿ ರಾಯ್ಸ್ 5 ಬಾಟಲ್ಗಳು ಸೇರಿದಂತೆ ಒಟ್ಟು 85 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ. ಪ್ರತಿ ಬಾಟಲ್ಗಳು 750 ಎಂ.ಎಲ್ ಇವೆ’ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)